ನವದೆಹಲಿ: ದೇಶದ ಆರ್ಥಿಕ ಬೆಳವಣಿಗೆಯ ಮೇಲೆ ‘ಕೋವಿಡ್–19’ ಕಾರ್ಮೋಡ ಆವರಿಸಿದ್ದು, ಏಪ್ರಿಲ್–ಜೂನ್ ಅವಧಿಯಲ್ಲಿ ಜಿಡಿಪಿ ಶೇ 23.9ರಷ್ಟು ಕುಸಿತ ಕಂಡಿದೆ.

2019–20ರ ಇದೇ ಅವಧಿಯಲ್ಲಿ ಜಿಡಿಪಿ ಶೇ 5.2ರಷ್ಟು ಬೆಳವಣಿಗೆ ಕಂಡಿತ್ತು ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್‌ಎಸ್‌ಒ) ಮಾಹಿತಿ ಬಿಡುಗಡೆ ಮಾಡಿದೆ.

ಕೊರೊನಾ ವೈರಸ್ ಹರಡುವಿಕೆ ನಿಯಂತ್ರಿಸಲು ಕೇಂದ್ರ ಸರ್ಕಾರವು ಮಾರ್ಚ್ 25ರಿಂದ ದೇಶದಾದ್ಯಂತ ಲಾಕ್‌ಡೌನ್ ಘೋಷಿಸಿತು. ಇದು ಆರ್ಥಿಕ ಚಟುವಟಿಕೆಗಳ ಮೇಲೆ ಪರಿಣಾಮ ಉಂಟುಮಾಡಿತು. ಕೃಷಿ ಹೊರತುಪಡಿಸಿ, ಮೂಲಸೌಕರ್ಯ, ನಿರ್ಮಾಣ ಮತ್ತು ಸೇವಾ ವಲಯಗಳು ಲಾಕ್‌ಡೌನ್‌ನಿಂದಾಗಿ ಹೆಚ್ಚು ಸಮಸ್ಯೆಗೆ ಒಳಗಾದವು.

ಏಪ್ರಿಲ್ 20ರ ಬಳಿಕ ಅನ್‌ಲಾಕ್ ಪ್ರಕ್ರಿಯೆ ಆರಂಭವಾಗಿದ್ದರೂ,ಆರ್ಥಿಕ ಚಟುವಟಿಕೆಗಳ ಮೇಲೆ ಹಾಗೂ ಅವುಗಳ ಮಾಹಿತಿ ಸಂಗ್ರಹ ವ್ಯವಸ್ಥೆಯ ಮೇಲೆ ಆಗಿರುವ ಪರಿಣಾಮ ಇನ್ನೂ ತಗ್ಗಿಲ್ಲ ಎಂದೂ ಹೇಳಿದೆ.

ಈ ಅವಧಿಯಲ್ಲಿ ಆರ್ಥಿಕ ಬೆಳವಣಿಗೆಯು ಇಳಿಮುಖವಾಗಿಯೇ ಇರಲಿದೆ ಎಂದು ಬಹುತೇಕ ರೇಟಿಂಗ್ ಸಂಸ್ಥೆಗಳು ಅಂದಾಜು ಮಾಡಿದ್ದವು.

ಚೀನಾದ ಆರ್ಥಿಕತೆಯು ಏಪ್ರಿಲ್–ಜೂನ್‌ನಲ್ಲಿ ಶೇ 3.2ರಷ್ಟು ಬೆಳವಣಿಗೆ ಸಾಧಿಸಿದೆ. ಜನವರಿ–ಮಾರ್ಚ್‌ನಲ್ಲಿ ಶೇ 6.8ರಷ್ಟು ಇಳಿಕೆಯಾಗಿತ್ತು.

ಜಿಡಿಪಿ ಬೆಳವಣಿಗೆ

2019–20 1ನೇ ತ್ರೈಮಾಸಿಕ;5.2%

2ನೇ ತ್ರೈಮಾಸಿಕ;4.4 %

3ನೇ ತ್ರೈಮಾಸಿಕ;4.1%

4ನೇ ತ್ರೈಮಾಸಿಕ;3.1%

2020–21ರ 1ನೇ ತ್ರೈಮಾಸಿಕ; –23.9%

ವಲಯಗಳ ಬೆಳವಣಿಗೆ ಇಳಿಕೆ

ತಯಾರಿಕೆ;39.3%

ನಿರ್ಮಾಣ;50.3%

ಗಣಿಗಾರಿಕೆ;23.3%

ವಿದ್ಯುತ್;7%

ರಿಯಲ್ ಎಸ್ಟೇಟ್, ವೃತ್ತಿಪರ ಸೇವೆಗಳು;5.3%

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.