ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಷ್ಯಾದ ಮಿಯರ್‌ ಡೆಬಿಟ್ ಕಾರ್ಡ್‌ಗೆ ಅನುಮತಿ?

Last Updated 21 ಆಗಸ್ಟ್ 2022, 19:31 IST
ಅಕ್ಷರ ಗಾತ್ರ

ನವದೆಹಲಿ: ರಷ್ಯಾದ ಮಿಯರ್‌ ಡೆಬಿಟ್ ಕಾರ್ಡ್‌ಗಳನ್ನು ಬಳಸಿ ಭಾರತದ ಎಟಿಎಂಗಳಿಂದ ಹಣ ಹಿಂದಕ್ಕೆ ಪಡೆಯುವುದಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡುವ ಸಾಧ್ಯತೆ ಇದೆ. ಇದಲ್ಲದೆ, ರೂಪೆ ಕಾರ್ಡ್‌ಗಳನ್ನು ರಷ್ಯಾದಲ್ಲಿ ಬಳಕೆ ಮಾಡುವುದಕ್ಕೆ ಅಲ್ಲಿನ ಸರ್ಕಾರ ಒಪ್ಪುವ ಸಾಧ್ಯತೆಯೂ ಇದೆ.

ಭಾರತದಲ್ಲಿ ಮಿಯರ್‌ ಕಾರ್ಡ್‌ಗಳ ಬಳಕೆಗೆ, ರಷ್ಯಾದಲ್ಲಿ ರೂಪೆ ಕಾರ್ಡ್‌ಗಳ ಬಳಕೆಗೆ ಅವಕಾಶ ದೊರೆತರೆ, ಎರಡೂ ದೇಶಗಳ ಪ್ರವಾಸಿಗರಿಗೆ ಹೆಚ್ಚಿನ ಅನುಕೂಲ ಆಗಲಿದೆ. ಉಕ್ರೇನ್ ಮೇಲೆ ಸಮರ ಸಾರಿದ ರಷ್ಯಾ ವಿರುದ್ಧ ಅಮೆರಿಕ ಹಾಗೂ ಇತರ ಹಲವು ದೇಶಗಳು ನಿರ್ಬಂಧಗಳನ್ನು ಹೇರಿದವು. ಇದಾದ ನಂತರದಲ್ಲಿ ವೀಸಾ ಮತ್ತು ಮಾಸ್ಟರ್‌ಕಾರ್ಡ್ ಕಂಪನಿಗಳು ರಷ್ಯಾ ಮಾರುಕಟ್ಟೆಯಿಂದ ಹೊರನಡೆದಿವೆ. ಇದರ ಪರಿಣಾಮವಾಗಿ ಭಾರತದ ಪ್ರವಾಸಿಗರು ರಷ್ಯಾಕ್ಕೆ ತೆರಳಿದಾಗ ಮತ್ತು ರಷ್ಯಾ ಪ್ರವಾಸಿಗರು ಭಾರತಕ್ಕೆ ಬಂದಾಗ ಹಣ ಹಿಂಪಡೆಯುವುದಕ್ಕೆ ಹಾಗೂ ಕಾರ್ಡ್‌ ಬಳಸಿ ಪಾವತಿ ಮಾಡುವುದಕ್ಕೆ ತೊಂದರೆ ಆಗುತ್ತಿದೆ.

ಮಿಯರ್, ರೂಪೆ ಕಾರ್ಡ್‌ಗಳ ಬಳಕೆಗೆ ಅನುಮತಿ ಕೊಡುವ ಕುರಿತು ಎರಡೂ ದೇಶಗಳ ನಡುವೆ ಮಾತುಕತೆ ನಡೆದಿದೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋಭಾಲ್‌ ಅವರು ಆಗಸ್ಟ್‌ 17, 18ರಂದು ರಷ್ಯಾಕ್ಕೆ ಭೇಟಿ ನೀಡಿದ್ದಾಗಲೂ ಈ ಬಗ್ಗೆ ಚರ್ಚೆ ನಡೆದಿದೆ ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT