ಶುಕ್ರವಾರ, ಅಕ್ಟೋಬರ್ 30, 2020
23 °C
ಬ್ಯಾಂಕುಗಳಿಗೆ ₹ 1,400 ಕೋಟಿ ವಂಚನೆ ಆರೋಪ

ಕ್ವಾಲಿಟಿ ಕಂಪನಿ ನಿರ್ದೇಶಕರ ವಿರುದ್ಧ ಪ್ರಕರಣ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ವಿವಿಧ ಬ್ಯಾಂಕುಗಳಿಗೆ ₹ 1,400 ಕೋಟಿಗೂ ಅಧಿಕ ಮೊತ್ತ ವಂಚಿಸಿದ ಆರೋಪದ ಮೇಲೆ ಐಸ್‌ಕ್ರೀಂ ತಯಾರಿಕಾ ಕಂಪನಿ 'ಕ್ವಾಲಿಟಿ ಲಿಮಿಟೆಡ್‌'ನ ನಿರ್ದೇಶಕರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ.

ಬ್ಯಾಂಕ್‌ ಆಫ್‌ ಇಂಡಿಯಾ ನೇತೃತ್ವದ ಬ್ಯಾಂಕುಗಳ ಒಕ್ಕೂಟ ದೂರು ನೀಡಿದ್ದು, ಕಂಪನಿಯ ನಿರ್ದೇಶಕರಾದ ಸಂಜಯ್‌ ಧಿಂಗ್ರ, ಸಿದ್ಧಾಂತ್‌ ಗುಪ್ತ ಹಾಗೂ ಅರುಣ್‌ ಶ್ರೀವಾಸ್ತವ ಸೇರಿದಂತೆ ಹಲವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ದೆಹಲಿ, ಸಹರಾನ್‌ಪುರ, ಬುಲಂದ್‌ಶಹರ್‌, ಅಜ್ಮೀರ್‌ ಹಾಗೂ ಪಲ್ವಾಲ್‌ ಸೇರಿದಂತೆ ಎಂಟು ಕಡೆಗಳಲ್ಲಿ ಕಂಪನಿಗೆ ಸೇರಿದ ಕಚೇರಿ, ಕಟ್ಟಡಗಳಲ್ಲಿ ಸಿಬಿಐ ಶೋಧ ಕಾರ್ಯಾಚರಣೆ ನಡೆಸಿದೆ.

ತೆರಿಗೆ ಉಳಿಸಲು ನಡೆಸಿರುವ ವಹಿವಾಟುಗಳು (ಶಾಮ್‌ ಟ್ರ್ಯಾನ್ಸಾಕ್ಷನ್ಸ್), ಬ್ಯಾಂಕ್‌ ಫಂಡ್‌ಗಳನ್ನು  ವರ್ಗಾಯಿಸಿರುವುದು, ಖೊಟ್ಟಿ ದಾಖಲೆಗಳು ಮತ್ತು ರಸೀದಿಗಳನ್ನು ಸೃಷ್ಟಿಸಿರುವುದು, ಲೆಕ್ಕಪತ್ರ ಸರಿಯಾಗಿ ನಿರ್ವಹಣೆ ಮಾಡದಿರುವ ಆರೋಪಗಳಡಿ ಕಂಪನಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಸಿಬಿಐ ವಕ್ತಾರ ಆರ್‌.ಕೆ.ಗೌರ್‌ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು