ಸೋಮವಾರ, ಸೆಪ್ಟೆಂಬರ್ 26, 2022
23 °C

ಸ್ಮಾರ್ಟ್‌ಫೋನ್ ಮಾರುಕಟ್ಟೆ ಶೇಕಡ 2.9ರಷ್ಟು ಬೆಳವಣಿಗೆ: ಐಡಿಸಿ ವರದಿ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಏಪ್ರಿಲ್‌–ಜೂನ್ ಅವಧಿಯಲ್ಲಿ ದೇಶದ ಸ್ಮಾರ್ಟ್‌ಫೋನ್ ಮಾರುಕಟ್ಟೆಯು ಶೇಕಡ 2.9ರಷ್ಟು ಬೆಳವಣಿಗೆ ಕಂಡಿದೆ ಎಂದು ಇಂಟರ್‌ನ್ಯಾಷನಲ್ ಡೇಟಾ ಕಾರ್ಪೊರೇಷನ್ (ಐಡಿಸಿ) ಸಿದ್ಧಪಡಿಸಿರುವ ವರದಿ ಹೇಳಿದೆ. ಸ್ಮಾರ್ಟ್‌ಫೋನ್ ಮಾರಾಟದಲ್ಲಿ ಶಓಮಿ ಕಂಪನಿಯು ಮೊದಲ ಸ್ಥಾನದಲ್ಲಿ ಇದೆ.

ದೇಶದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಮೊದಲ ಮೂರು ಸ್ಥಾನಗಳನ್ನು ಚೀನಾದ ಕಂಪನಿಗಳು ಪಡೆದುಕೊಂಡಿವೆ ಎಂದು ವರದಿ ಹೇಳಿದೆ. ರಿಯಲ್‌ಮಿ ಮತ್ತು ವಿವೊ ಕ್ರಮವಾಗಿ ಎರಡು ಮತ್ತು ಮೂರನೆಯ ಸ್ಥಾನಗಳಲ್ಲಿ ಇವೆ. ಸ್ಯಾಮ್‌ಸಂಗ್‌ ನಾಲ್ಕನೆಯ ಸ್ಥಾನ ಪಡೆದಿದೆ.

ಜೂನ್ ತ್ರೈಮಾಸಿಕದಲ್ಲಿ ಒಟ್ಟು 3.47 ಕೋಟಿ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆ ಪ್ರವೇಶಿಸಿವೆ ಎಂದು ಐಡಿಸಿ ವರದಿ ಅಂದಾಜು ಮಾಡಿದೆ. ಇದು ಹಿಂದಿನ ವರ್ಷದ ಜೂನ್‌ ತ್ರೈಮಾಸಿಕದಲ್ಲಿ ಮಾರುಕಟ್ಟೆ ಪ್ರವೇಶಿಸಿದ್ದ 3.38 ಕೋಟಿ ಸ್ಮಾರ್ಟ್‌ಫೋನ್‌ಗಳ ಸಂಖ್ಯೆಗೆ ಹೋಲಿಸಿದರೆ ಶೇಕಡ 2.9ರಷ್ಟು ಹೆಚ್ಚು.

ಕಂಪನಿ; ಮಾರುಕಟ್ಟೆಗೆ ತಂದ ಸ್ಮಾರ್ಟ್‌ಫೋನ್ ಸಂಖ್ಯೆ; ಮಾರುಕಟ್ಟೆ ಪಾಲು (%)

ಶಓಮಿ; 71 ಲಕ್ಷ; 20.4

ರಿಯಲ್‌ಮಿ; 61 ಲಕ್ಷ; 17.5

ವಿವೊ; 59 ಲಕ್ಷ; 16.9

ಸ್ಯಾಮ್‌ಸಂಗ್‌; 57 ಲಕ್ಷ; 16.3

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು