ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇ 1ರಷ್ಟು ಚಾಲ್ತಿ ಖಾತೆ ಕೊರತೆ

Published 26 ಡಿಸೆಂಬರ್ 2023, 15:52 IST
Last Updated 26 ಡಿಸೆಂಬರ್ 2023, 15:52 IST
ಅಕ್ಷರ ಗಾತ್ರ

ಮುಂಬೈ: ದೇಶದಲ್ಲಿ ಚಾಲ್ತಿ ಖಾತೆ ಕೊರತೆಯು (ಸಿಎಡಿ) ಪ್ರಸಕ್ತ ಹಣಕಾಸು ವರ್ಷದ ಜುಲೈ–ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಒಟ್ಟು ಜಿಡಿಪಿಯ ಶೇ 1ರಷ್ಟು (₹69,000 ಕೋಟಿ) ಆಗಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ತಿಳಿಸಿದೆ.

ದೇಶದಲ್ಲಿ ವ್ಯಾಪಾರದ ಕೊರತೆ ಜಾಸ್ತಿಯಾಗಿದೆ. ಮತ್ತೊಂದೆಡೆ ಸೇವಾ ರಫ್ತು ಪ್ರಮಾಣ ಹೆಚ್ಚಳವಾಗಿದೆ. ಈ ಅಂಶಗಳೇ ಚಾಲ್ತಿ ಖಾತೆ ಕೊರತೆ ಸೃಷ್ಟಿಗೆ ಕಾರಣವಾಗಿವೆ ಎಂದು ಮಂಗಳವಾರ ಬಿಡುಗಡೆಯಾಗಿರುವ ಆರ್‌ಬಿಐ ವರದಿ ಹೇಳಿದೆ.

ಮೌಲ್ಯದ ಲೆಕ್ಕದಲ್ಲಿ ಭಾರತದ ಚಾಲ್ತಿ ಖಾತೆ ಕೊರತೆಯು 2022-23ನೇ ಸಾಲಿನ ಜುಲೈ–ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ₹2.56 ಲಕ್ಷ ಕೋಟಿಗೆ ತಲು‍ಪಿತ್ತು (ಶೇ 3.8). 

ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್‌–ಜೂನ್‌ ಮೊದಲ ತ್ರೈಮಾಸಿಕದಲ್ಲಿ ₹76,483 ಕೋಟಿ (ಶೇ 1.1ರಷ್ಟು) ಇತ್ತು. ದೇಶದಲ್ಲಿ ಸಾಫ್ಟ್‌ವೇರ್‌, ವ್ಯಾ‍ಪಾರ ಮತ್ತು ಪ್ರವಾಸಿ ಸೇವೆ ಒಳಗೊಂಡ ಸೇವಾ ರಫ್ತು ಶೇ 4.2ರಷ್ಟು ಹೆಚ್ಚಳವಾಗಿದೆ ಎಂದು ವರದಿ ಹೇಳಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT