ರಫ್ತು ವಹಿವಾಟು ಮೌಲ್ಯವು ಶೇ 1.2ರಷ್ಟು ಕುಸಿತವಾಗಿದೆ. ಒಟ್ಟು ₹2.85 ಲಕ್ಷ ಕೋಟಿ ಮೌಲ್ಯದ ರಫ್ತು ವಹಿವಾಟು ನಡೆದಿದೆ. ಆಮದು ವಹಿವಾಟು ಮೌಲ್ಯವು ಶೇ 7.45ರಷ್ಟು ಏರಿಕೆಯಾಗಿದ್ದು, ಒಟ್ಟು ₹4.82 ಲಕ್ಷ ಕೋಟಿ ಮೌಲ್ಯದ ವಸ್ತುಗಳನ್ನು ಆಮದು ಮಾಡಿಕೊಳ್ಳಲಾಗಿದೆ. ಕಚ್ಚಾ ತೈಲ, ಬೆಳ್ಳಿ ಮತ್ತು ಎಲೆಕ್ಟ್ರಾನಿಕ್ಸ್ ಸರಕುಗಳು ಹೆಚ್ಚಿನ ಪ್ರಮಾಣದಲ್ಲಿ ಆಮದಾಗಿವೆ.