ಸೋಮವಾರ, ಅಕ್ಟೋಬರ್ 26, 2020
24 °C

ಇಂಧನ ಬೇಡಿಕೆ ಶೇ -11.5ರಷ್ಟು ಕುಸಿಯಲಿದೆ: ಫಿಚ್‌ ಸಲ್ಯೂಷನ್ಸ್‌

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಕೋವಿಡ್‌–19 ಸೃಷ್ಟಿಸಿರುವ ಬಿಕ್ಕಟ್ಟಿನಿಂದಾಗಿ ಭಾರತದ ಇಂಧನ ಬೇಡಿಕೆಯು 2020ರಲ್ಲಿ ಶೇ (–) 11.5ರಷ್ಟು ಇಳಿಕೆ ಆಗಲಿದೆ ಎಂದು ಫಿಚ್‌ ಸಲ್ಯೂಷನ್ಸ್‌ ತಿಳಿಸಿದೆ.

ಇಂಧನ ಬೇಡಿಕೆಯು ಶೇ (–) 9.4ರಷ್ಟು ಇಳಿಕೆ ಆಗಲಿದೆ ಎಂದು ಈ ಹಿಂದೆ ಹೇಳಿತ್ತು. ಆದರೆ ದೇಶದ ಆರ್ಥಿಕ ಬೆಳವಣಿಗೆ ಮುನ್ನೋಟವು ಇನ್ನಷ್ಟು ಕುಸಿತ ಕಾಣಲಿದ್ದು, ಅದಕ್ಕೆ ಅನುಗುಣವಾಗಿ ಇಂಧನ ಬೇಡಿಕೆಯನ್ನೂ ಪರಿಷ್ಕರಣೆ ಮಾಡಲಾಗಿದೆ. ಜಿಡಿಪಿಯು ಶೇ (–) 4.45ರಷ್ಟಕ್ಕೆ ಬದಲಾಗಿ ಶೇ (–) 8.6ರಷ್ಟಿರಲಿದೆ ಎಂದು ಹೇಳಿದೆ.

ಗ್ರಾಹಕ ಮತ್ತು ಕೈಗಾರಿಕಾ ಬಳಕೆಯ ಇಂಧನ ಬೇಡಿಕೆ ತೀವ್ರ ಕುಸಿತ ಕಂಡಿದೆ. ಕೊರೊನಾ ವೈರಸ್‌ ಹರಡುವಿಕೆ ನಿಯಂತ್ರಣಕ್ಕೆ ಬಂದ ಬಳಿಕ ಹಾಗೂ ಆರ್ಥಿಕ ಚಟುವಟಿಕೆಗಳು ಸಹಜ ಸ್ಥಿತಿಗೆ ಬಂದ ಮೇಲೆ 2021 ಮತ್ತು 2022ರಲ್ಲಿ ಜಿಡಿಪಿ ಶೇ 5ರಷ್ಟು ಬೆಳವಣಿಗೆ ಕಾಣಲಿದೆ ಎಂದೂ ಹೇಳಿದೆ.

ದೇಶದಾದ್ಯಂತ ಜಾರಿಯಲ್ಲಿದ್ದ ಲಾಕ್‌ಡೌನ್‌ ಮೇ 31ರಿಂದ ತೆರವಾಗಿದೆ. ಆದರೆ, ರಾಜ್ಯಗಳ ಮಟ್ಟದಲ್ಲಿ ಈಗಲೂ ಲಾಕ್‌ಡೌನ್‌ ನಿರ್ಬಂಧಗಳು ಜಾರಿಯಲ್ಲಿವೆ. ಇದರಿಂದ ಆರ್ಥಿಕ ಚೇತರಿಕೆಗೆ ಅಡ್ಡಿಯಾಗುತ್ತಿದೆ.

ಗರಿಷ್ಠ ಪ್ರಮಾಣದ ನಿರುದ್ಯೋಗ ಮತ್ತು ವರಮಾನ ನಷ್ಟದಿಂದಾಗಿ ಗ್ರಾಹಕರ ಖರೀದಿ ಸಾಮರ್ಥ್ಯ ಕುಗ್ಗಿದೆ. ಇದರಿಂದ ವಾಣಿಜ್ಯ ವಹಿವಾಟುಗಳ ಮೇಲಿನ ಹೂಡಿಕೆಯೂ ಕಡಿಮೆಯಾಗುವಂತಾಗಿದೆ. ಲಾಕ್‌ಡೌನ್‌ನಿಂದಾಗಿ ಸಾರಿಗೆ ವಲಯವು ಅತಿ ಹೆಚ್ಚಿನ ನಷ್ಟಕ್ಕೆ ಗುರಿಯಾಗಿದೆ ಎಂದೂ ಹೇಳಿದೆ.

ಆಗಸ್ಟ್‌ನಲ್ಲಿ ಬೇಡಿಕೆ ಇಳಿಕೆ

ಜೆಟ್‌ ಇಂಧನ-46.6%

ಡೀಸೆಲ್‌-25%

ಪೆಟ್ರೋಲ್-16.1%

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು