ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3 ವರ್ಷದಲ್ಲಿ ಭಾರತ 5 ಟ್ರಿಲಿಯನ್ ಆರ್ಥಿಕತೆ

Published 29 ಜನವರಿ 2024, 16:28 IST
Last Updated 29 ಜನವರಿ 2024, 16:28 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರದ ಮಧ್ಯಂತರ ಬಜೆಟ್‌ ಮಂಡನೆಗೆ ಎರಡು ದಿನ ಬಾಕಿ ಉಳಿದಿರುವ ಬೆನ್ನಲ್ಲೇ 2024–25ನೇ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕ ಬೆಳವಣಿಗೆ ದರವು (ಜಿಡಿಪಿ) ಶೇ 7ರಷ್ಟು ಆಗಬಹುದು ಎಂಬ ನಿರೀಕ್ಷೆ ಇದೆ ಎಂದು ಕೇಂದ್ರ ಹಣಕಾಸು ಸಚಿವಾಲಯದ ವರದಿ ಸೋಮವಾರ ಹೇಳಿದೆ.

2023–24ನೇ ಹಣಕಾಸು ವರ್ಷದಲ್ಲಿ ಜಿಡಿಪಿ ಬೆಳವಣಿಗೆಯು ಶೇ 7.3ರಷ್ಟು ಇರಲಿದೆ ಎಂದು ಅಂದಾಜಿಸಲಾಗಿದೆ. ಹಿಂದಿನ ಹಣಕಾಸು ವರ್ಷದಲ್ಲಿ ಶೇ 7.2ರಷ್ಟಿತ್ತು. ವಿಶ್ವದ ಆರ್ಥಿಕತೆಯು ಶೇ 2ರಷ್ಟು ಬೆಳವಣಿಗೆ ಸಾಧಿಸಲು ಹರಸಾಹಸಪಡುತ್ತಿರುವ ನಡುವೆಯೇ ಈ ವರದಿ ಪ್ರಕಟಿಸಲಾಗಿದೆ.

ಮುಂದಿನ ಮೂರು ವರ್ಷಗಳಲ್ಲಿ ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿದೆ. ಜಿಡಿಪಿ ಗಾತ್ರವು ₹415 ಲಕ್ಷ ಕೋಟಿಗೆ ತಲುಪಲಿದೆ (5 ಟ್ರಿಲಿಯನ್‌ ಡಾಲರ್‌). 2030ರ ವೇಳೆಗೆ ₹581 ಲಕ್ಷ ಕೋಟಿಗೆ ತಲುಪಲಿದೆ (7 ಟ್ರಿಲಿಯನ್‌ ಡಾಲರ್‌). 2023–24ರಲ್ಲಿ ₹307 ಲಕ್ಷ ಕೋಟಿಗೆ (3.7 ಟ್ರಿಲಿಯನ್ ಡಾಲರ್‌) ಮುಟ್ಟಲಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ. 

‘ಕೋವಿಡ್‌ ಸಾಂಕ್ರಾಮಿಕ ನಂತರದ ನಾಲ್ಕು ವರ್ಷಗಳಲ್ಲಿ ದೇಶದ ಜಿಡಿಪಿ ಸತತವಾಗಿ ಶೇ 7ಕ್ಕಿಂತಲೂ ಹೆಚ್ಚು ಬೆಳವಣಿಗೆ ದಾಖಲಿಸುತ್ತಿದೆ. ಇದು ಅತ್ಯುತ್ತಮ ಸಾಧನೆಯಾಗಿದೆ’ ಎಂದು ಮುಖ್ಯ ಹಣಕಾಸು ಸಲಹೆಗಾರ ವಿ. ಅನಂತ ನಾಗೇಶ್ವರನ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT