ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸೇವಾ ಚಟುವಟಿಕೆ ಇಳಿಕೆ: ಐದು ತಿಂಗಳ ಕನಿಷ್ಠ ಮಟ್ಟಕ್ಕೆ ದಾಖಲು

Published 5 ಜೂನ್ 2024, 12:35 IST
Last Updated 5 ಜೂನ್ 2024, 12:35 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಸೇವಾ ವಲಯದ ಚಟುವಟಿಕೆಗಳು ಮೇ ತಿಂಗಳಿನಲ್ಲಿ ಐದು ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಕೆ ಕಂಡಿವೆ.

ಜಾಗತಿಕ ಮಟ್ಟದಲ್ಲಿನ ತೀವ್ರ ಸ್ಪರ್ಧೆ, ಬೆಲೆ ಏರಿಕೆ ಮತ್ತು ಬಿಸಿ ಗಾಳಿಯೇ ಸೇವಾ ಚಟುವಟಿಕೆಗಳು ಕುಗ್ಗಲು ಕಾರಣವಾಗಿದೆ. ಆದರೆ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೊಸ ಆರ್ಡರ್‌ಗಳ ಸಂಖ್ಯೆಯಲ್ಲಿ ಏರಿಕೆಯಾಗಿದ್ದು, ಒಂದು ದಶಕದ ಗರಿಷ್ಠ ಮಟ್ಟಕ್ಕೆ ತಲುಪಿದೆ ಎಂದು ಬುಧವಾರ ಬಿಡುಗಡೆಯಾಗಿರುವ ಎಸ್‌ ಆ್ಯಂಡ್‌ ಪಿ ಗ್ಲೋಬಲ್‌ ಇಂಡಿಯಾ ಸಂಸ್ಥೆಯ ವರದಿ ತಿಳಿಸಿದೆ.‌

ಸೇವಾ ವಲಯದ ಚಟುವಟಿಕೆಯನ್ನು ಸೂಚಿಸುವ ಎಚ್‌ಎಸ್‌ಬಿಸಿ ಇಂಡಿಯಾ ಸರ್ವಿಸ್‌ ಬ್ಯುಸಿನೆಸ್‌ ಸೂಚ್ಯಂಕವು, ಮೇ ತಿಂಗಳಿನಲ್ಲಿ 60.2 ಇದೆ. ಏಪ್ರಿಲ್‌ನಲ್ಲಿ 61.5 ಇತ್ತು. ಕಳೆದ ವರ್ಷದ ಡಿಸೆಂಬರ್‌ನಲ್ಲಿ 60.8 ದಾಲಾಗಿತ್ತು. 

ಪರ್ಚೇಸಿಂಗ್ ಮ್ಯಾನೇಜರ್ಸ್ ಸೂಚ್ಯಂಕವು (ಪಿಎಂಐ) 50ರ ಮೇಲಿದ್ದರೆ ಬೆಳವಣಿಗೆಯು ಸಶಕ್ತವಾಗಿದೆ ಎಂದು ಅರ್ಥೈಸಲಾಗುತ್ತದೆ. 50ಕ್ಕಿಂತ ಕಡಿಮೆ ಇದ್ದರೆ ಬೆಳವಣಿಗೆಯು ಕುಂಠಿತವಾಗಿದೆ ಎಂದರ್ಥ.  

ಹೊಸ ವ್ಯಾಪಾರ ಸೇವೆಯು ಸದೃಢಗೊಂಡಿದೆ. ಇದು ದೇಶದ ಸೇವಾ ಚಟುವಟಿಕೆಗಳ ಬೆಳವಣಿಗೆಗೆ ‍ಪೂರಕವಾಗಿದೆ ಎಂದು ವರದಿಯ ಅಂಕಿಅಂಶಗಳು ಹೇಳುತ್ತವೆ. ಅಲ್ಲದೆ, ಎಂಟು ತಿಂಗಳ ಅವಧಿಯಲ್ಲಿ ವ್ಯಾ‍‍ಪಾರ ವಹಿವಾಟು ಬಲವರ್ಧನೆಗೊಂಡಿರುವುದು ಸಕಾರಾತ್ಮಕ ಬೆಳವಣಿಗೆಯಾಗಿದೆ. 

ಮಾರಾಟ, ಉತ್ಪಾದನಾ ಪ್ರಮಾಣದಲ್ಲಿನ ಏರಿಕೆ ಮತ್ತು ಬೇಡಿಕೆ ಸದೃಢಗೊಂಡಿರುವುದೇ ಹೊಸ ವ್ಯಾ‍ಪಾರದ ಬೆಳವಣಿಗೆಗೆ ಬಲ ನೀಡಿದೆ. ಆದರೆ, ಸ್ಪರ್ಧಾತ್ಮಕ ಮತ್ತು ಬೆಲೆ ಒತ್ತಡವು ವ್ಯಾಪಾರ ಚಟುವಟಿಕೆಗಳ ಹೆಚ್ಚಳಕ್ಕೆ ಅಲ್ಪಮಟ್ಟಿಗೆ ಅಡ್ಡಿಯಾಗಿದೆ ಎಂದು ಹೇಳಿದೆ.

‘ಮೇ ತಿಂಗಳಿನಲ್ಲಿ ಭಾರತದ ಸೇವಾ ವಲಯದ ಚಟುವಟಿಕೆಗಳು ಮಂದಗತಿಯಲ್ಲಿ ಏರಿಕೆ ಕಂಡಿದೆ. ದೇಶೀಯ ಮಟ್ಟದಲ್ಲಿನ ಹೊಸ ಆರ್ಡರ್‌ಗಳು ಇದಕ್ಕೆ ನೆರವಾಗಿವೆ. ಆದರೆ, ಮೇ ತಿಂಗಳಿನಲ್ಲಿ ಕಚ್ಚಾ ಸರಕು ಮತ್ತು ಕಾರ್ಮಿಕರ ವೆಚ್ಚದಲ್ಲಿ ಏರಿಕೆಯಾಗಿದೆ’ ಎಂದು ಎಚ್‌ಎಸ್‌ಬಿಸಿ ಅರ್ಥಶಾಸ್ತ್ರಜ್ಞೆ ಮೈತ್ರೇಯಿ ದಾಸ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT