ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಿಗ್ಗಿ, ಫ್ಲಿಪ್‌ಕಾರ್ಟ್‌ನಲ್ಲಿ ಉದ್ಯೋಗ ಕಡಿತ?

Published 25 ಜನವರಿ 2024, 19:49 IST
Last Updated 25 ಜನವರಿ 2024, 19:49 IST
ಅಕ್ಷರ ಗಾತ್ರ

ಬೆಂಗಳೂರು: ಸ್ವಿಗ್ಗಿ ಮತ್ತು ಫ್ಲಿಪ್‌ಕಾರ್ಟ್‌ ಕಂಪನಿಗಳು ಉದ್ಯೋಗ ಕಡಿತಕ್ಕೆ ಮುಂದಾಗಿವೆ.

ರೆಸ್ಟೊರೆಂಟ್‌ ಮತ್ತು ಹೋಟೆಲ್‌ಗಳಿಂದ ಜನರ ಮನೆ ಬಾಗಿಲಿಗೆ ಆಹಾರ ತಲುಪಿಸುವ ಸ್ವಿಗ್ಗಿ ಕಂಪನಿಯು 400 (ಶೇ 6ರಷ್ಟು) ಉದ್ಯೋಗಿಗಳನ್ನು ಸೇವೆಯಿಂದ ವಜಾಗೊಳಿಸಲು ಸಿದ್ಧತೆ ನಡೆಸಿದೆ ಎಂದು ಹೇಳಲಾಗಿದೆ. ಆದರೆ, ಈ ಬಗ್ಗೆ ಕಂಪನಿಯ ವಕ್ತಾರರು ಯಾವುದೇ ‍ಪ್ರತಿಕ್ರಿಯೆ ನೀಡಿಲ್ಲ.

ಮುಂಬರುವ ವಾರಗಳಲ್ಲಿ ತಂತ್ರಜ್ಞಾನ, ಕಾಲ್ ಸೆಂಟರ್‌ ಮತ್ತು ಕಾರ್ಪೊರೇಟ್‌ ವಿಭಾಗದಲ್ಲಿ ಹಂತ ಹಂತವಾಗಿ ಉದ್ಯೋಗ ಕಡಿತವಾಗಲಿದೆ ಎಂದು ಹೇಳಲಾಗಿದೆ.

ಆರ್ಥಿಕ ಬಿಕ್ಕಟ್ಟಿನಿಂದಾಗಿ ಕಳೆದ ವರ್ಷದ ಜನವರಿಯಲ್ಲಿ ಸ್ವಿಗ್ಗಿಯು 380 ಉದ್ಯೋಗಿಗಳನ್ನು ವಜಾಗೊಳಿಸಿತ್ತು. ವೆಚ್ಚ ಕಡಿತದ ದೃಷ್ಟಿಯಿಂದ ಈ ವರ್ಷವೂ ಇಂತಹ ಕ್ರಮಕ್ಕೆ ಮುಂದಾಗಿದೆ ಎನ್ನಲಾಗಿದೆ.

ಕಂಪನಿಯಲ್ಲಿ 5,500ಕ್ಕೂ ಉದ್ಯೋಗಿಗಳು ಇದ್ದಾರೆ. ಜುಲೈನಿಂದ ಸೆಪ್ಟೆಂಬರ್‌ ನಡುವೆ ಕಂಪನಿಯು ಆರಂಭಿಕ ಸಾರ್ವಜನಿಕ ಹೂಡಿಕೆಗೆ (ಐಪಿಒ) ನಿರ್ಧರಿಸಿದೆ. ಒಟ್ಟು ₹8 ಸಾವಿರ ಕೋಟಿ ಸಂಗ್ರಹಿಸುವ ಗುರಿ ಹೊಂದಿದೆ. ಆದರೆ, ಈ ಪ್ರಕ್ರಿಯೆ ಆರಂಭಿಸುವುದಕ್ಕೂ ಮೊದಲೇ ಉದ್ಯೋಗಿಗಳ ವಜಾಕ್ಕೆ ಮುಂದಾಗಿದೆ. 

ಸಾವಿರ ಉದ್ಯೋಗಿಗಳ ವಜಾ?

ಫ್ಲಿಪ್‌ಕಾರ್ಟ್‌ನಲ್ಲೂ ಶೀಘ್ರವೇ ಉದ್ಯೋಗಿಗಳ ಕಾರ್ಯಕ್ಷಮತೆ ಸಂಬಂಧಿತ ವಜಾ ಪ್ರಕ್ರಿಯೆ ನಡೆಯಲಿದೆ. ಒಂದು ಸಾವಿರ ಉದ್ಯೋಗಿಗಳು ಕಂಪನಿಯಿಂದ ನಿರ್ಗಮಿಸುವ ಸಾಧ್ಯತೆಯಿದೆ ಎಂದು ‘ಪ್ರಜಾವಾಣಿ’ಗೆ ಕಂಪನಿಯ ಮೂಲಗಳು ತಿಳಿಸಿವೆ.

ಕಂಪನಿಯಲ್ಲಿ 22 ಸಾವಿರ ಉದ್ಯೋಗಿಗಳಿದ್ದಾರೆ. ಈ ಪೈಕಿ ಕೆಲಸದ ಸಾಮರ್ಥ್ಯವನ್ನು ಮಾನದಂಡವಾಗಿ ಪರಿಗಣಿಸಿ ಉದ್ಯೋಗಿಗಳನ್ನು ವಜಾಗೊಳಿಸುವ ಸಾಧ್ಯತೆ ಎಂದು ತಿಳಿಸಿವೆ.

‘ಫ್ಲಿಪ್‌ಕಾರ್ಟ್‌ನಲ್ಲಿ ಉದ್ಯೋಗಿಗಳನ್ನು ವಜಾಗೊಳಿಸುತ್ತಿಲ್ಲ. ಆದರೆ, ಪ್ರತಿವರ್ಷದ ಮಾರ್ಚ್‌ನಲ್ಲಿ ಉದ್ಯೋಗಿಗಳ ಕೆಲಸದ ಮೌಲ್ಯಮಾಪನ ಪ್ರಕ್ರಿಯೆ ನಡೆಯುತ್ತದೆ. ಕಡಿಮೆ ಸಾಮರ್ಥ್ಯ ತೋರಿದವರು ಕಂಪನಿಯಿಂದ ಸಹಜವಾಗಿ ನಿರ್ಗಮಿಸುತ್ತಾರೆ’ ಎಂದು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT