ಗುರುವಾರ , ಆಗಸ್ಟ್ 5, 2021
21 °C

ವಿಶ್ವ ಸಿರಿವಂತರ ಪಟ್ಟಿಯಲ್ಲಿ ವಾರನ್‌ ಬಫೆಟ್‌ ಹಿಂದೆ ಸರಿಸಿದ ಮುಕೇಶ್‌ ಅಂಬಾನಿ

ಏಜನ್ಸಿಸ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ತೈಲ ಸಂಸ್ಕರಣೆ, ಟೆಲಿಕಾಂ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಛಾಪು ಮೂಡಿಸಿರುವ ರಿಲಯನ್ಸ್‌ ಇಂಡಸ್ಟ್ರೀಸ್‌ನ ಒಡೆಯ ಮುಕೇಶ್‌ ಅಂಬಾನಿ ಸದ್ಯ ಹೊಸ ದಾಖಲೆ ಬರೆದಿದ್ದಾರೆ. ವಿಶ್ವ ಸಿರಿವಂತರ ಪಟ್ಟಿಯಲ್ಲಿ ವಾರನ್‌ ಬಫೆಟ್‌ ಅವರನ್ನು ಹಿಂದಿಟ್ಟಿರುವ ಅವರು 8ನೇ ಸ್ಥಾನಕ್ಕೆ ಏರಿದ್ದಾರೆ.

ಇದನ್ನೂ ಓದಿ: ₹24,797 ಕೋಟಿದೇಣಿಗೆ ನೀಡಿದ ವಾರನ್ ಬಫೆಟ್

‘ಬ್ಲೂಮ್ಬರ್ಗ್ ಬಿಲಿಯನೇರ್‌ಗಳ ಸೂಚ್ಯಂಕ’ದ ಪ್ರಕಾರ, 68.3 ಬಿಲಿಯನ್ ಡಾಲರ್‌ ಆಸ್ತಿ ಹೊಂದಿರುವ ಮುಕೇಶ್‌ ಅಂಬಾನಿ, ಗುರುವಾರದ 67.9 ಬಿಲಿಯನ್ ಡಾಲರ್‌ಗಳ ಸಿರಿವಂತ ವಾರನ್‌ ಬಫೆಟ್‌ ಅವರನ್ನು ಹಿಂದೆ ಸರಿಸಿದ್ದಾರೆ.

ರಿಲಯನ್ಸ್‌ ಡಿಜಿಟಲ್ ಘಟಕವು ಇತ್ತೀಚೆಗೆ ಫೇಸ್‌ಬುಕ್ ಮತ್ತು ಸಿಲ್ವರ್ ಲೇಕ್ ಸೇರಿದಂತೆ ಹಲವು ಕಂಪನಿಗಳಿಂದ 15 ಬಿಲಿಯನ್‌ ಡಾಲರ್‌ಗಿಂತಲೂ ಹೆಚ್ಚಿನ ಹೂಡಿಕೆಗಳನ್ನು ಪಡೆದಿದೆ. ಹೀಗಾಗಿ ಅಂಬಾನಿಯ ಅವರ ಸಂಸ್ಥೆಯ ಶೇರುಗಳು ಎರಡು ಪಟ್ಟು ಹೆಚ್ಚಾಗಿವೆ. ಈ ವಾರ ರಿಲಯನ್ಸ್‌ನ ಇಂಧನ-ಚಿಲ್ಲರೆ ವ್ಯಾಪಾರದಲ್ಲಿ ಬಿಪಿ ಪಿಎಲ್‌ಸಿ ಸಂಸ್ಥೆಯು 1 ಬಿಲಿಯನ್ ಡಾಲರ್‌ಗಳನ್ನು ಪಾಲುದಾರಿಕೆಗಾಗಿ ಹೂಡಿಕೆ ಮಾಡಿದೆ.

ಸಂಪತ್ತಿನಲ್ಲಿ ಏರಿಕೆಯಾದ ಹಿನ್ನೆಲೆಯಲ್ಲಿ ಅಂಬಾನಿ ಅವರು ಕಳೆದ ತಿಂಗಳು ವಿಶ್ವದ ಹತ್ತು ಶ್ರೀಮಂತರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದರು. ಈ ಮೂಲಕ ವಿಶ್ವದ ಆಗ್ರ ಹತ್ತರ ಪಟ್ಟಿಯಲ್ಲಿ ಕಾಣಿಸಿಕೊಂಡ ಏಷ್ಯಾದ ಏಕೈಕ ಸಿರಿವಂತ ಎಂಬ ಖ್ಯಾತಿಗೆ ಅವರು ಪಾತ್ರರಾಗಿದ್ದರು. ಈ ಮಧ್ಯೆ ವಾರನ್‌ ಬಫೆಟ್‌ ಅವರು 2.9 ಬಿಲಿಯನ್‌ ಡಾಲರ್‌ಗಳನ್ನು ದಾನ ಮಾಡಿದ ಹಿನ್ನೆಲೆಯಲ್ಲಿ ಅವರು ಅಂಬಾನಿಗಿಂತಲೂ ಒಂದು ಸ್ಥಾನ ಕೆಳಕ್ಕೆ ಜಾರಿದ್ದಾರೆ. ಈಗ ಅವರು ಹತ್ತನೇ ಸ್ಥಾನದಲ್ಲಿದ್ದಾರೆ.

63ರ ಹರೆಯದ ಅಂಬಾನಿ ಈಗ ವಿಶ್ವದ ಎಂಟನೇ ಶ್ರೀಮಂತ ವ್ಯಕ್ತಿಯಾಗಿದ್ದರೆ, ಬಫೆಟ್ ಒಂಬತ್ತನೇ ಸ್ಥಾನದಲ್ಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು