ನವದೆಹಲಿ: ಈಕ್ವಿಟಿ ಮ್ಯೂಚುವಲ್ ಫಂಡ್‌ಗಳಲ್ಲಿ ಮಾರ್ಚ್‌ನಲ್ಲಿ ಆಗಿದ್ದ ಬಂಡವಾಳ ಹೂಡಿಕೆಗೆ ಹೋಲಿಸಿದರೆ ಏಪ್ರಿಲ್‌ನಲ್ಲಿ ಇಳಿಕೆ ಕಂಡುಬಂದಿದೆ. ಮಾರ್ಚ್‌ನಲ್ಲಿ ₹ 9,115 ಕೋಟಿ ಹೂಡಿಕೆ ಆಗಿತ್ತು. ಏಪ್ರಿಲ್‌ನಲ್ಲಿ ₹ 3,437 ಕೋಟಿ ಹೂಡಿಕೆ ಆಗಿದೆ.

ಭಾರತೀಯ ಮ್ಯೂಚುವಲ್ ಫಂಡ್ ಸಂಸ್ಥೆಗಳ ಒಕ್ಕೂಟ (ಎಎಂಎಫ್‌ಐ) ಈ ಮಾಹಿತಿ ನೀಡಿದೆ.

2020ರ ಜುಲೈನಿಂದ 2021ರ ಫೆಬ್ರುವರಿವರೆಗೂ ಈಕ್ವಿಟಿ ಮ್ಯೂಚುವಲ್ ಫಂಡ್‌ಗಳಿಂದ ಬಂಡವಾಳ ಹಿಂತೆಗೆತ ಕಂಡುಬಂದಿತ್ತು.

ಈ ವರ್ಷದ ಏಪ್ರಿಲ್‌ನಲ್ಲಿ ಸಾಲಪತ್ರ ಆಧಾರಿತ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆದಾರರು ₹ 1 ಲಕ್ಷ ಕೋಟಿ ಹೂಡಿಕೆ ಮಾಡಿದ್ದಾರೆ. ಮಾರ್ಚ್‌ನಲ್ಲಿ ₹ 52,528 ಕೋಟಿ ಬಂಡವಾಳ ಹಿಂದಕ್ಕೆ ಪಡೆದಿದ್ದರು. ಚಿನ್ನದ ವಿನಿಮಯ ವಹಿವಾಟು ನಿಧಿಗಳಿಂದ (ಇಟಿಎಫ್) ಏಪ್ರಿಲ್‌ನಲ್ಲಿ ₹ 680 ಕೋಟಿ ಬಂಡವಾಳ ಹೊರಹೋಗಿದೆ.

ಮ್ಯೂಚುವಲ್ ಫಂಡ್ ಉದ್ಯಮದ ನಿರ್ವಹಣಾ ಸಂಪತ್ತು ಮೌಲ್ಯವು ಮಾರ್ಚ್ ಅಂತ್ಯದ ವೇಳೆಗೆ ₹ 31.43 ಲಕ್ಷ ಕೋಟಿಗಳಷ್ಟಿತ್ತು. ಏಪ್ರಿಲ್ ಅಂತ್ಯದ ವೇಳೆಗೆ ₹ 32.38 ಲಕ್ಷ ಕೋಟಿಗಳಿಗೆ ಏರಿಕೆ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.