ನವದೆಹಲಿ: ಚಿನ್ನದ ವಿನಿಮಯ ವಹಿವಾಟು ನಿಧಿಗಳಲ್ಲಿ (ಇಟಿಎಫ್) ಬಂಡವಾಳ ಹೂಡಿಕೆಯು ಅಕ್ಟೋಬರ್‌ನಲ್ಲಿ ಶೇ 35 ರಷ್ಟು ಇಳಿಕೆ ಆಗಿದ್ದು, ₹ 384 ಕೋಟಿಗಳಷ್ಟಾಗಿದೆ.

ಹೂಡಿಕೆದಾರರು ಷೇರುಗಳಲ್ಲಿ ನೇರವಾಗಿ ಹಣ ತೊಡಗಿಸುತ್ತಿರುವುದರಿಂದ ಚಿನ್ನದ ಇಟಿಎಫ್‌ನಲ್ಲಿ ಹೂಡಿಕೆ ಕಡಿಮೆಯಾಗುತ್ತಿದೆ ಎಂದು ಭಾರತೀಯ ಮ್ಯೂಚುವಲ್ ಫಂಡ್ ಸಂಸ್ಥೆಗಳ ಒಕ್ಕೂಟ (ಎಎಂಎಫ್‌ಐ) ಮಾಹಿತಿ ನೀಡಿದೆ.

2020ರ ಜನವರಿ–ಅಕ್ಟೋಬರ್ ಅವಧಿಯಲ್ಲಿ ಚಿನ್ನದ ಇಟಿಎಫ್‌ನಲ್ಲಿ ಒಟ್ಟಾರೆ ಹೂಡಿಕೆಯು ₹ 6,341 ಕೋಟಿಗಳಿಗೆ ತಲುಪಿದೆ.

ಚಿನ್ನದ ಇಟಿಎಫ್‌ನ ನಿರ್ವಹಣಾ ಸಂಪತ್ತು ಅಕ್ಟೋಬರ್‌ನಲ್ಲಿ ₹ 13,862 ಕೋಟಿಗಳಿಗೆ ತಲುಪಿದೆ. ಸೆಪ್ಟೆಂಬರ್ ಅಂತ್ಯದ ವೇಳಗೆ 4 13,622 ಕೋಟಿಗಳಷ್ಟಿತ್ತು.

ಒಳಹರಿವು ಸಕಾರಾತ್ಮಕವಾಗಿ ಮುಂದುವರಿದಿದೆ. ಆದರೆ, ಹೂಡಿಕೆ ಮೊತ್ತ ಕಡಿಮೆಯಾಗುತ್ತಿದೆ. ಆರ್ಥಿಕ ಚಟುವಟಿಕೆಗಳ ಚೇತರಿಕೆ, ಷೇರುಪೇಟೆಯ ಏರುಮುಖ ಚಲನೆ, ಅಮೆರಿಕ ಅಧ್ಯಕ್ಷೀಯ ಚುನಾವಣೆ ಕುರಿತ ಅನಿಶ್ಚಿತತೆ ಅಂತ್ಯವಾಗಿರುವುದು ಹಾಗೂ ಕೋವಿಡ್–19ಗೆ ಲಸಿಕೆ ಸಿಗುವ ಭರವಸೆಯಂತಹ ವಿದ್ಯಮಾನಗಳಿಂದಾಗಿ ಹೂಡಿಕೆದಾರರು ನೇರವಾಗಿ ಷೇರುಗಳಲ್ಲಿಯೇ ಹಣ ತೊಡಗಿಸುತ್ತಿದ್ದಾರೆ ಎಂದು ಫೈರ್ ಕಂಪನಿಯ ಮುಖ್ಯ ಸಂಶೋಧಕ ಗೋಪಾಲ್ ಕಾವಲಿರೆಡ್ಡಿ ತಿಳಿಸಿದ್ದಾರೆ.

ಶೇ 10 ರಿಂದ ಶೇ 15ರಷ್ಟು ಚಿನ್ನದ ಮೇಲೆ ಹೂಡಿಕೆ ಮಾಡುವಂತೆ ಕಾವಲರೆಡ್ಡಿ ಅವರು ಹೂಡಿಕೆದಾರರರಿಗೆ ಸಲಹೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.