ಭಾನುವಾರ, ಆಗಸ್ಟ್ 1, 2021
27 °C

ಎಂಎಫ್‌ ಯುನಿಟ್‌ಗಳ ಮೇಲೆ ತಕ್ಷಣವೇ ಸಾಲ: ಐಸಿಐಸಿಐ ಬ್ಯಾಂಕ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಡೆಟ್‌ ಮತ್ತು ಈಕ್ವಿಟಿ ಮ್ಯೂಚುವಲ್‌ ಫಂಡ್‌ ಯುನಿಟ್‌ಗಳನ್ನು ಒತ್ತೆ ಇಟ್ಟು ತಕ್ಷಣವೇ ₹ 1 ಕೋಟಿಯವರೆಗೆ ಸಾಲ ಪಡೆಯುವ ಸೌಲಭ್ಯವನ್ನು ಐಸಿಐಸಿಐ ಬ್ಯಾಂಕ್‌ ಆರಂಭಿಸಿದೆ.

ಈ ಸಾಲ ಪಡೆಯುವ ಪ್ರಕ್ರಿಯೆಯು ಕಾಗದರಹಿತವಾಗಿ ಸಂಪೂರ್ಣ ಡಿಜಿಟಲ್‌ ಆಗಿರಲಿದೆ. ಓವರ್‌ ಡ್ರಾಫ್ಟ್‌ (ಒಡಿ) ರೂಪದಲ್ಲಿ ಪಡೆಯಬಹುದಾಗಿದೆ. ಕೋವಿಡ್‌ ಬಿಕ್ಕಟ್ಟಿನ ಸಂದರ್ಭದಲ್ಲಿ ಇದು ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದು ಬ್ಯಾಂಕ್‌ ತಿಳಿಸಿದೆ.

ವರ್ಷದ ಹಿಂದೆ ಆರಂಭಿಸಿದ್ದ ಇನ್‌ಸ್ಟಾ ಎಲ್‌ಎಎಸ್‌ನ ವಿಸ್ತರಿತ ಯೋಜನೆ ಇದಾಗಿದೆ.

‘ಇನ್‌ಸ್ಟಾ ಲೋನ್‌ ಅಗೆನೆಸ್ಟ್‌ ಮ್ಯೂಚುವಲ್‌ ಫಂಡ್‌’ ಹೆಸರಿನ ಈ ಸೌಲಭ್ಯವನ್ನು ದೇಶದ ಮ್ಯೂಚುವಲ್‌ ಫಂಡ್‌ ರಿಜಿಸ್ಟ್ರಾರ್ ಮತ್ತು ವರ್ಗಾವಣೆ ಏಜೆನ್ಸಿಯಾದ ಕಂಪ್ಯೂಟರ್‌ ಏಜ್‌ ಮ್ಯಾನೇಜ್‌ಮೆಂಟ್‌ ಸರ್ವೀಸಸ್‌ ಪಾಲುದಾರಿಕೆಯಲ್ಲಿ ಆರಂಭಿಸಿದೆ. ‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು