ನವದೆಹಲಿ: ದೇಶದ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಸಾಂಸ್ಥಿಕ ಹೂಡಿಕೆಯು ಹಿಂದಿನ ವರ್ಷದ ಮೊದಲ ಆರು ತಿಂಗಳಿಗೆ ಹೋಲಿಸಿದರೆ ಈ ವರ್ಷದ ಆರು ತಿಂಗಳಿನಲ್ಲಿ ಎರಡು ಪಟ್ಟು ಹೆಚ್ಚಾಗಿದೆ ಎಂದು ಆಸ್ತಿ ಸಲಹಾ ಸಂಸ್ಥೆ ಕೋಲಿಯರ್ಸ್ ಹೇಳಿದೆ.

2021ರ ಮೊದಲ ಆರು ತಿಂಗಳಿನಲ್ಲಿ ₹ 21,636 ಕೋಟಿ ಹೂಡಿಕೆ ಆಗಿದೆ ಎಂದು ಅದು ತಿಳಿಸಿದೆ.

2020ನೆಯ ಇಸವಿಯನ್ನು ಇಡಿಯಾಗಿ ಪರಿಗಣಿಸಿದರೆ, ರಿಯಲ್ ಎಸ್ಟೇಟ್‌ನಲ್ಲಿ ₹ 35,812 ಕೋಟಿ ಸಾಂಸ್ಥಿಕ ಹೂಡಿಕೆ ಆಗಿತ್ತು. ಇದಕ್ಕೆ ಹೋಲಿಸಿದರೆ 2021ರಲ್ಲಿ ಸಾಂಸ್ಥಿಕ ಹೂಡಿಕೆಯು ಶೇಕಡ 4ರಷ್ಟು ಏರಿಕೆ ಆಗುವ ನಿರೀಕ್ಷೆ ಇದ್ದು, ₹ 37,305 ಕೋಟಿಗೆ ತಲುಪಲಿದೆ ಎಂದು ಮಂಗಳವಾರ ಬಿಡುಗಡೆ ಮಾಡಿರುವ ವರದಿಯಲ್ಲಿ ತಿಳಿಸಿದೆ.

ಕಚೇರಿ ಸ್ವತ್ತುಗಳ ಬಗ್ಗೆ ಹೂಡಿಕೆದಾರರ ಆಸಕ್ತಿಯು ಮುಂದುವರಿದಿದ್ದು, ಈ ವರ್ಷದ ಮೊದಲಾರ್ಧದಲ್ಲಿ ಒಟ್ಟಾರೆ ಹೂಡಿಕೆಯಲ್ಲಿ ಕಚೇರಿ ಸ್ವತ್ತುಗಳ ಮೇಲಿನ ಹೂಡಿಕೆಯು ಶೇ 35ರಷ್ಟಾಗಿದೆ.

ಆಕರ್ಷಕ ಮೌಲ್ಯಕ್ಕೆ ಸ್ವತ್ತುಗಳನ್ನು ಪಡೆಯಲು ಸದ್ಯದ ಪರಿಸ್ಥಿತಿಯನ್ನು ಒಂದು ಅವಕಾಶ ಎಂದು ಹೂಡಿಕೆದಾರರು ಪರಿಗಣಿಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.

ಕೈಗಾರಿಕೆ ಮತ್ತು ಉಗ್ರಾಣ ವಲಯದಲ್ಲಿ ₹ 5,782 ಕೋಟಿ ಹೂಡಿಕೆ ಆಗಿದ್ದು, 2016ರ ಬಳಿಕ ವರ್ಷವೊಂದರ ಅತ್ಯಂತ ಗರಿಷ್ಠ ಮೊತ್ತದ ಹೂಡಿಕೆ ಇದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.