ನವದೆಹಲಿ: 'ಉದ್ಯಮಗಳ ನಿರೀಕ್ಷೆಗೆ ಅನುಗುಣವಾಗಿ ಸರ್ಕಾರ ನೀತಿಗಳನ್ನು ಜಾರಿಗೊಳಿಸಿದ್ದು, ಈಗ ಹೆಚ್ಚಿನ ಹೂಡಿಕೆ ಮಾಡಲು ಹಿಂಜರಿಯಬಾರದು' ಎಂದು ಉದ್ಯಮಗಳಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು (ಗುರುವಾರ) ಮನವಿ ಮಾಡಿದ್ದಾರೆ.

ಐಎಫ್ಕ್ಯೂಎಂ ವಿಚಾರ ಸಂಕಿರಣದಲ್ಲಿ ಮಾತನಾಡಿದ ನಿರ್ಮಲಾ, 'ಉದ್ಯಮಗಳಿಗೆ ಹೂಡಿಕೆ ಮಾಡಲು ಹಾಗೂ ಸಾಮರ್ಥ್ಯ ವಿಸ್ತರಿಸಲು ಇದು ಸಕಾಲವಾಗಿದೆ ಎಂದು ತಿಳಿಸಿದ್ದಾರೆ.

ಯುವಜನರನ್ನು ಕೌಶಲ್ಯಪೂರ್ಣಗೊಳಿಸುವಲ್ಲಿ ಬಜೆಟ್ಗೆ ಮುನ್ನ ಮಾತ್ರವಲ್ಲದೆ ವರ್ಷವಿಡೀ ಸರ್ಕಾರದೊಂದಿಗೆ ತೊಡಗಿಸಿಕೊಳ್ಳುವಂತೆ ನಿರ್ಮಲಾ ಒತ್ತಾಯಿಸಿದ್ದಾರೆ.

ಉದ್ಯಮವು ಈಗ ಏನು ಮಾಡಬೇಕು ಎಂಬ ಟಾಟಾ ಸನ್ಸ್ ಮುಖ್ಯಸ್ಥ ಎನ್. ಚಂದ್ರಶೇಖರನ್ ಅವರ ಪ್ರಶ್ನೆಗೆ ಉತ್ತರಿಸಿದ ಸೀತಾರಾಮನ್, 'ಸುಧಾರಣೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಎಂದೂ ಹಿಂಜರಿಕೆ ತೋರಿಲ್ಲ. ಉದ್ಯಮದ ಆಶೋತ್ತರಗಳನ್ನು ನಿರ್ಲಕ್ಷಿಸಿಲ್ಲ' ಎಂದು ಪ್ರತಿಕ್ರಿಯಿಸಿದ್ದಾರೆ.

'ಉದ್ಯಮದ ನಿರೀಕ್ಷೆಗೆ ಅನುಗುಣವಾಗಿ ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ಸುಲಭವಾಗಿ ವ್ಯಾಪಾರ ಮಾಡಲು, ತೆರಿಗೆ ಸರಳೀಕರಣ, ಎಫ್ಡಿಐ ಸೇರಿದಂತೆ ಉದ್ಯಮಕ್ಕೆ ಅನುಕೂಲಕಾರದ ನೀತಿಯನ್ನು ರೂಪಿಸಿದೆ' ಎಂದು ಹೇಳಿದ್ದಾರೆ.
.ಜಿಎಸ್ಟಿ ಪರಿಷ್ಕರಣೆ | ದೇಶದ ಅರ್ಥ ವ್ಯವಸ್ಥೆಗೆ ₹2 ಲಕ್ಷ ಕೋಟಿ: ಸಚಿವೆ ನಿರ್ಮಲಾ.GST ಪರಿಷ್ಕರಣೆಯಿಂದ ದರ ಕಡಿತ: ಮಳಿಗೆ ಮುಂದೆ ಜಾಹೀರಾತಿಗೆ ಸಚಿವಾಲಯದ ಸೂಚನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.