ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ದರಗಳ ಪರಿಷ್ಕರಣೆಯಿಂದ ಉತ್ಪನ್ನಗಳ ದರ ಕಡಿತದ ಬಗ್ಗೆ ರಿಟೇಲ್ ಮಳಿಗೆಗಳ ಮುಂದೆ ಪ್ರದರ್ಶಿಸಬೇಕು ಮತ್ತು ಜಾಹೀರಾತು ಪ್ರಕಟಿಸುವಂತೆ ಚಿಲ್ಲರೆ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಸೂಚಿಸಿದೆ.

ಅಂಗಡಿಗಳಲ್ಲಿ ನೀಡುವ ಬಿಲ್ನಲ್ಲಿ ಜಿಎಸ್ಟಿ ಕಡಿತದ ಬಗ್ಗೆ ಉಲ್ಲೇಖಿಸಬೇಕು. ಜಿಎಸ್ಟಿ ರಿಯಾಯಿತಿ ಮತ್ತು ಹೆಚ್ಚಿನ ಪರಿಣಾಮ ಬೀರುವ ಉತ್ಪನ್ನಗಳ ಮೇಲೆ ಗಮನ ಹರಿಸಬೇಕು ಎಂದೂ ಹೇಳಿದೆ.
.ಆಳ–ಅಗಲ | ಜಿಎಸ್ಟಿ ಇಳಿಕೆ: ತಗ್ಗೀತೇ ಜನರ ಹೊರೆ?.
ಮುದ್ರಣ, ಟಿವಿ, ಆನ್ಲೈನ್ನಲ್ಲಿ ನೀಡುವ ಪೋಸ್ಟರ್, ಫ್ಲೈಯರ್ ಜಾಹೀರಾತುಗಳಲ್ಲೂ ‘ಜಿಎಸ್ಟಿ ಪರಿಷ್ಕರಣೆಯಿಂದಾಗಿ ರಿಯಾಯಿತಿ’ ಎಂದು ನಮೂದಿಸಬೇಕು. ಮುಖ್ಯವಾಗಿ ಹಬ್ಬಗಳ ಸಂದರ್ಭದಲ್ಲಿ ಉತ್ಪನ್ನಗಳ ಮಾರಾಟವನ್ನು ಗಮನಿಸಬೇಕು ಎಂದು ವಿವರಿಸಿದೆ.
.ಆಳ–ಅಗಲ | ವಿಮೆಗೆ ಜಿಎಸ್ಟಿ; ಇಳಿಯಲಿದೆಯೇ ಹೊರೆ?.
ಜಿಎಸ್ಟಿ ಮಂಡಳಿಯು ಸಾಮಾನ್ಯ ಜನರು ಬಳಸುವ ವಸ್ತುಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ದರಗಳನ್ನು ಪರಿಷ್ಕರಿಸಿದ್ದು, ಸೆ.22ರಿಂದ ಜಾರಿಗೆ ಬರುತ್ತಿದೆ.

ಸೋಪುಗಳಿಂದ ಹಿಡಿದು ಕಾರುಗಳವರೆಗೆ, ಶಾಂಪೂಗಳಿಂದ ಹಿಡಿದು ಟ್ರಾಕ್ಟರ್, ಹವಾನಿಯಂತ್ರಕಗಳವರೆಗೆ ಸುಮಾರು 400 ಉತ್ಪನ್ನಗಳ ಒಟ್ಟಾರೆ ಬೆಲೆಯಲ್ಲಿ ಕಡಿತವಾಗಲಿದೆ.
.ಹಣಕಾಸು | ಜಿಎಸ್ಟಿ ಇಳಿಕೆ: ಯಾರಿಗೆಲ್ಲ ಲಾಭ?.New GST Rules | ಯಾವೆಲ್ಲಾ ಅಗ್ಗ? ಯಾವೆಲ್ಲಾ ದುಬಾರಿ? ಇಲ್ಲಿ ತಿಳಿಯಿರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.