ಸಿಯಾಟಲ್: ಅಮೆಜಾನ್‌ನ ₹16 ಸಾವಿರ ಕೋಟಿಗಿಂತ ಹೆಚ್ಚಿನ ಮೌಲ್ಯದ 1.2 ಕೋಟಿ ಷೇರುಗಳನ್ನು ಮಾರಾಟ ಮಾಡಲಾಗಿದೆ ಎಂದು ಕಂಪನಿಯ ಕಾರ್ಯಕಾರಿ ಅಧ್ಯಕ್ಷ ಜೆಫ್ ಬೆಜೋಸ್ ತಿಳಿಸಿದ್ದಾರೆ.

ಫೆಬ್ರುವರಿ 7 ಮತ್ತು 8ರಂದು 1,19,97,698 ಸಾಮಾನ್ಯ ಷೇರುಗಳ ಮಾರಾಟದ ಕುರಿತು ಅಮೆರಿಕದ ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಕಮಿಷನ್‌ಗೆ ಬೆಜೋಸ್ ತಿಳಿಸಿದ್ದಾರೆ.

ಫೆಬ್ರುವರಿ 7ರ ಮತ್ತೊಂದು ಪ್ರತ್ಯೇಕ ಫೈಲಿಂಗ್‌ನಲ್ಲಿ, ಅಂದಾಜು ₹69 ಸಾವಿರ ಕೋಟಿ ಮೌಲ್ಯದ 5 ಕೋಟಿ ಷೇರುಗಳ ಮಾರಾಟಕ್ಕೆ ಬೆಜೋಸ್ ಪ್ರಸ್ತಾವನೆ ಸಲ್ಲಿಸಿದ್ದಾರೆ.

ಅಮೆಜಾನ್ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಹುದ್ದೆಯಿಂದ ಬೆಜೋಸ್ ಅವರು ವೈಯಕ್ತಿಕ ಕಾರಣದಿಂದ 2021ರಲ್ಲಿ ಕೆಳಗಿಳಿದಿದ್ದರು. ಸುಮಾರು ಮೂರು ದಶಕಗಳ ಹಿಂದೆ ಸಿಯಾಟಲ್‌ನಲ್ಲಿ ಅಮೆಜಾನ್ ಕಂಪನಿಯನ್ನು ಸ್ಥಾಪಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.