ಶನಿವಾರ, ಫೆಬ್ರವರಿ 22, 2020
19 °C

ಜಿಯೊ ಫೈಬರ್‌ ಹೊಸ ಪ್ರೀಪೇಯ್ಡ್‌ ಟಾಪ್‌ ಅಪ್‌ ಯೋಜನೆ; ವಾರಕ್ಕೆ ₹199

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಜಿಯೊ ಫೈಬರ್‌ ಸಂಪರ್ಕದಲ್ಲಿ ವಿಡಿಯೊ ಕಾಲಿಂಗ್‌ – ಚಿತ್ರ ಕೃಪೆ: ಜಿಯೊ ಫೈಬರ್‌ ವೆಬ್‌ಸೈಟ್‌

ಜಿಯೊ ಫೈಬರ್‌ ಹೊಸ ಪ್ರೀಪೇಯ್ಡ್‌ ವೋಚರ್‌ ಪರಿಚಯಿಸಿದೆ. ವಾರಕ್ಕೆ ₹199 ರೀಚಾರ್ಜ್‌ ಮಾಡಿಸಿದರೆ ಅನಿಯಮಿತ ವಾಯ್ಸ್‌ ಕಾಲ್‌ ಹಾಗೂ ನಿಗದಿತ ಹೈಸ್ಪೀಡ್‌ ಡಾಟಾ ಪಡೆಯಬಹುದು. 

ಈ ಹಿಂದೆ ನಿಗದಿಯಾಗಿರುವಂತೆ ಜಿಯೊ ಫೈಬರ್‌ ಪ್ರೀಪೇಯ್ಡ್‌ ಯೋಜನೆಗಳು ₹699 ರಿಂದ ₹8,499ರ ವರೆಗೂ ಇದೆ. ಆಯ್ಕೆ ಮಾಡಿಕೊಂಡ ಯೋಜನೆಯಲ್ಲಿ ಹೈಸ್ಪೀಡ್‌ ಡಾಟಾ ಡೌನ್‌ಲೋಡ್‌ ಮಿತಿ ಪೂರ್ಣಗೊಂಡರೆ, ಹೊಸ ಪ್ರೀಪೇಯ್ಡ್‌ ವೋಚರ್‌ ರೀಚಾರ್ಜ್ ಮೂಲಕ ಡಾಟಾ ಮಿತಿ ಹೆಚ್ಚಿಸಿಕೊಳ್ಳಬಹುದಾಗಿದೆ. 

₹199 ಟಾಪ್‌ ಅಪ್‌ ರೀಚಾರ್ಜ್ ಮಾಡಿಕೊಂಡರೆ ಒಂದು ವಾರ 100 ಎಂಬಿಪಿಎಸ್‌ ವೇಗದಲ್ಲಿ ಅನಿಯಮಿತ ಡಾಟಾ, ಅನಿಯಮಿತ ವಾಯ್ಸ್‌ ಕಾಲ್‌ ಹಾಗೂ ಹಾಗೂ ಟಿವಿ ವಿಡಿಯೊ ಕಾಲಿಂಗ್‌ ಸೇವೆ ಸಿಗುತ್ತದೆ.

ಜಿಯೊ ಫೈಬರ್‌ ಸಂಪರ್ಕ ಪಡೆಯುವ ಹೊಸ ಗ್ರಾಹಕರಿಗೆ ಸಿಗುತ್ತಿದ್ದ ಉಚಿತ ಬಳಕೆ ಸೇವೆಯ ಅವಕಾಶವನ್ನು ಕೈಬಿಡಲಾಗಿದ್ದು, ಮೊದಲ ತಿಂಗಳಿನಿಂದಲೇ ಪ್ರೀಪೇಯ್ಡ್‌ ಯೋಜನೆ ಆಯ್ಕೆ ಮಾಡಿಕೊಂಡು ಸೇವೆ ಪಡೆಯಬೇಕಿದೆ. ಜಿಯೊ ಫೈಬರ್‌ ಸಂಪರ್ಕ ಮತ್ತು ಅದಕ್ಕೆ ಅಗತ್ಯ ಸಾಧನ ಪಡೆಯಲು ₹2,500 ಮರಳಿ ಪಡೆಯಬಹುದಾದ ಠೇವಣಿ ನೀಡಬೇಕು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು