ಸೋಮವಾರ, ಸೆಪ್ಟೆಂಬರ್ 27, 2021
28 °C

ರಿಲಯನ್ಸ್‌ ರಿಟೇಲ್‌: ಫುಲ್‌ ಪೈಸಾ ವಸೂಲ್‌ ಮಾರಾಟ ಮೇಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಿಲಯನ್ಸ್ ರಿಟೇಲ್ ಕಂಪನಿಯು ಶನಿವಾರದಿಂದ ಬುಧವಾರದವರೆಗೆ ‘ಫುಲ್ ಪೈಸಾ ವಸೂಲ್ ಸೇಲ್’ ಹೆಸರಿನಲ್ಲಿ ದಿನಸಿ ವಸ್ತುಗಳ ಮಾರಾಟ ಮೇಳ ಆಯೋಜಿಸಿದೆ.

ಕಂಪನಿಯ ಇ–ಮಾರುಕಟ್ಟೆಯಾದ ಜಿಯೊಮಾರ್ಟ್‌ನಲ್ಲಿ ಈ ಮೇಳ ನಡೆಯುತ್ತಿದೆ. ಅಲ್ಲದೆ, ಸುಪರ್ ಸ್ಮಾರ್ಟ್‌ ಸ್ಟೋರ್‌ಗಳಲ್ಲಿ, ರಿಲಯನ್ಸ್ ಫ್ರೆಷ್‌ನಲ್ಲಿ, ಸ್ಮಾರ್ಟ್‌ ಪಾಯಿಂಟ್‌ಗಳಲ್ಲಿ ಕೂಡ ಖರೀದಿಸಬಹುದಾಗಿದೆ. ಮೇಳದಲ್ಲಿ ಭಾರಿ ಉಳಿತಾಯ ಮಾಡುವ ಅವಕಾಶಗಳು ಗ್ರಾಹಕರಿಗೆ ಲಭ್ಯವಾಗಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿವೆ.

ಬಿಸ್ಕತ್‌, ಚಾಕೊಲೇಟ್‌ ಮತ್ತು ಶಾಂಪು ಮೇಲೆ ಶೇ 50ರವರೆಗೆ ರಿಯಾಯಿತಿ, ತಂಪು ಪಾನೀಯಗಳು, ತೂತ್‌ಪೇಸ್ಟ್‌ ಮತ್ತು ಸೋಪ್‌ ಮೇಲೆ ಕನಿಷ್ಠ ಶೇ 33ರಷ್ಟು ರಿಯಾಯಿತಿ ಸಿಗಲಿದೆ. ಜಿಯೊಮಾರ್ಟ್‌ನ ಮೂಲಕ ಖರೀದಿ ಮಾಡುವವರಿಗೆ, ವಸ್ತುಗಳನ್ನು ಉಚಿತವಾಗಿ ಅವರ ಮನೆಗೆ ತಲುಪಿಸಲಾಗುತ್ತದೆ. ಕನಿಷ್ಠ ಮೊತ್ತದ ವಸ್ತುಗಳನ್ನು ಖರೀದಿಸಬೇಕು ಎಂದು ಷರತ್ತು ಇಲ್ಲ ಎಂದು ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು