ಮುಂಬೈ: ಜಾನ್ಸನ್ & ಜಾನ್ಸನ್ ಬೇಬಿ ಪೌಡರ್ ಉತ್ಪಾದನೆಗೆ ಮಹಾರಾಷ್ಟ್ರ ಸರ್ಕಾರ ಹೇರಿದ್ದ ನಿಷೇಧವನ್ನು ಬಾಂಬೆ ಹೈ ಕೋರ್ಟ್ ರದ್ದು ಮಾಡಿದೆ.

ಆದರೆ ಅವುಗಳ ಮಾರಾಟದ ಮೇಲಿನ ನಿಷೇಧ ಮುಂದುವರಿಸಿದೆ. ಜತೆಗೆ ಸ್ಯಾಂಪಲ್ಗಳನ್ನು ಹೊಸದಾಗಿ ಪರೀಕ್ಷೆಗೆ ಒಳಪಡಿಸಬೇಕು ಎಂದು ಆದೇಶಿಸಿದೆ.

ಜಾನ್ಸನ್ಸ್ ಬೇಬಿ ಪೌಡರ್ನಲ್ಲಿ ಹಾನಿಕಾರಕ ಅಂಶಗಳಿದ್ದು, ಹೀಗಾಗಿ ತಕ್ಷಣವೇ ಉತ್ಪಾದನೆ ನಿಲ್ಲಿಸಬೇಕು ಎಂದು ಮಹಾರಾಷ್ಟ್ರ ಸರ್ಕಾರ ಸೆಪ್ಟೆಂಬರ್ 15 ರಂದು ಸೂಚನೆ ನೀಡಿ, ಪರವಾನಗಿ ರದ್ದು ಮಾಡಿತ್ತು.

ಮಹಾರಾಷ್ಟ್ರ ಆಹಾರ ಹಾಗೂ ಔಷಧ ಆಡಳಿತ, ಜಾನ್ಸನ್ ಆಂಡ್ ಜಾನ್ಸನ್ ಬೇಬಿ ಪೌಡರ್ನ ಉತ್ಪಾದನಾ ಪರವಾನಗಿಯನ್ನು ರದ್ದು ಮಾಡಿತ್ತು.

ಇದನ್ನು ಪ್ರಶ್ನಿಸಿ ಕಂಪನಿ ಹೈಕೋರ್ಟ್ ಮೊರೆ ಹೋಗಿತ್ತು. ಸದ್ಯ ಉತ್ಪಾದನೆ ಮೇಲಿರುವ ನಿಷೇಧವನ್ನು ಹೈಕೋರ್ಟ್ ರದ್ದು ಮಾಡಿದೆ.

ನ್ಯಾಯಮೂರ್ತಿಗಳಾದ ಗಂಗಾಪುರವಾಲ ಹಾಗೂ ಎಸ್.ಜಿ ಡಿಗೆ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದ್ದು, ಹೊಸ ಸ್ಯಾಂಪಲ್ಗಳನ್ನು ಸಂಗ್ರಹಿಸಿ ಮೂರು ದಿನದೊಳಗೆ ಮೂರು ಪ್ರಯೋಗಾಲಯಕ್ಕೆ ಕಳುಹಿಸಿ ಎಂದು ನಿರ್ದೇಶಿಸಿದೆ.

ಎರಡು ಸರ್ಕಾರಿ ಪ್ರಯೋಗಾಲಯ ಹಾಗೂ ಒಂದು ಖಾಸಗಿ ಪ್ರಯೋಗಾಲಯಕ್ಕೆ ಸ್ಯಾಂಪಲ್ಗಳನ್ನು ಕಳುಹಿಸಲು ಕೋರ್ಟ್ ಸೂಚನೆ ನೀಡಿದ್ದು, ವಾರದೊಳಗಾಗಿ ವರದಿ ನೀಡಿ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.