ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೋಯಾಲುಕ್ಕಾಸ್‌ನಲ್ಲಿ ಅಕ್ಷಯ ತೃತೀಯಾ ಕೊಡುಗೆಗಳು

Last Updated 27 ಏಪ್ರಿಲ್ 2022, 10:45 IST
ಅಕ್ಷರ ಗಾತ್ರ

ಬೆಂಗಳೂರು: ಚಿನ್ನಾಭರಣ ಮಾರಾಟ ಕಂಪನಿಯಾಗಿರುವ ಜೋಯಾಲುಕ್ಕಾಸ್, ಅಕ್ಷಯ ತೃತೀಯಾ ಸಂದರ್ಭದಲ್ಲಿ ಆಭರಣ ಖರೀದಿಸುವವರಿಗೆ ಉಚಿತ ಗಿಫ್ಟ್ ವೋಚರ್‌ಗಳನ್ನು ನೀಡಲಿದೆ. ₹ 50 ಸಾವಿರಕ್ಕಿಂತ ಹೆಚ್ಚಿನ ಮೊತ್ತದ ವಜ್ರ, ಕತ್ತರಿಸದ ವಜ್ರ ಮತ್ತು ಅಮೂಲ್ಯ ಆಭರಣ ಖರೀದಿಸಿದರೆ ₹ 2,000 ಮೌಲ್ಯದ ವೋಚರ್ ಸಿಗಲಿದೆ.

₹ 50 ಸಾವಿರಕ್ಕಿಂತ ಹೆಚ್ಚಿನ ಮೊತ್ತದ ಚಿನ್ನಾಭರಣ ಖರೀದಿಗೆ ₹ 1,000 ಮೌಲ್ಯದ ಗಿಫ್ಟ್ ವೋಚರ್, ₹ 10 ಸಾವಿರ ಮೌಲ್ಯದ ಬೆಳ್ಳಿ ಆಭರಣ ಖರೀದಿಸಿದರೆ ₹ 500 ಮೌಲ್ಯದ ಗಿಫ್ಟ್ ವೋಚರ್ ಸಿಗಲಿದೆ ಎಂದು ಪ್ರಕಟಣೆ ತಿಳಿಸಿದೆ. ಗ್ರಾಹಕರು ಎಸ್‌ಬಿಐ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ವಹಿವಾಟು ನಡೆಸಿದರೆ ಹೆಚ್ಚುವರಿಯಾಗಿ ಶೇ 5ರಷ್ಟು ರಿಯಾಯಿತಿ ಇರಲಿದೆ.

ಜೋಯಾಲುಕ್ಕಾಸ್ ಕಂಪನಿಯ ಎಲ್ಲ ಮಳಿಗೆಗಳಲ್ಲಿ ಮೇ 3ರವರೆಗೆ ಈ ಕೊಡುಗೆಗಳು ಜಾರಿಯಲ್ಲಿ ಇರಲಿವೆ. ಆಭರಣಗಳಿಗೆ ಆಜೀವ ಉಚಿತ ನಿರ್ವಹಣೆ, ಬೈ-ಬ್ಯಾಕ್ ಖಾತರಿಯನ್ನು ಕೂಡ ಕಂಪನಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT