ಮಂಗಳವಾರ, ಡಿಸೆಂಬರ್ 7, 2021
20 °C

ಜೋಯಾಲುಕ್ಕಾಸ್‌: ದೀಪಾವಳಿಗೆ ₹ 100 ಕೋಟಿ ಮೌಲ್ಯದ ಗಿಫ್ಟ್‌ ವೋಚರ್!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಚಿನ್ನಾಭರಣ ಕಂಪನಿ ಜೋಯಾಲುಕ್ಕಾಸ್‌, ಈ ಬಾರಿಯ ದೀಪಾವಳಿ ಹಬ್ಬಕ್ಕಾಗಿ ತನ್ನ ಗ್ರಾಹಕರಿಗೆ ಒಟ್ಟು ₹ 100 ಕೋಟಿ ಮೌಲ್ಯದ ಗಿಫ್ಟ್‌ ವೋಚರ್‌ಗಳನ್ನು ನೀಡಲಿದೆ.

‘ಈ ವರ್ಷ ನಮ್ಮ ಗ್ರಾಹಕರಿಗೆ ಉಚಿತ ಗಿಫ್ಟ್‌ ವೋಚರ್‌ಗಳನ್ನು ಕೊಡುಗೆಯಾಗಿ ನೀಡುತ್ತಿದ್ದೇವೆ. ಇದನ್ನು ಅವರು ಹೆಚ್ಚಿನ ಆಭರಣ ಖರೀದಿಸಲು ಬಳಸಬಹುದು’ ಎಂದು ಜೋಯಾಲುಕ್ಕಾಸ್‌ ಸಮೂಹದ ಅಧ್ಯಕ್ಷ ಜಾಯ್‌ ಅಲುಕ್ಕಾಸ್‌ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಕೊಡುಗೆ ಅಡಿಯಲ್ಲಿ, ಗ್ರಾಹಕರಿಗೆ ₹ 50 ಸಾವಿರ ಮೌಲ್ಯದ ಚಿನ್ನದ ಆಭರಣಗಳ ಖರೀದಿಯ ಮೇಲೆ ₹ 1000 ಮೊತ್ತದ ಗಿಫ್ಟ್‌ ವೋಚರ್‌ ನೀಡಲಾಗುವುದು. ವಜ್ರಾಭರಣ ಪ್ರಿಯರಿಗೆ ₹ 25 ಸಾವಿರ ಮೌಲ್ಯದ ಡೈಮಂಡ್‌, ಅನ್‌ಕಟ್‌ ಮತ್ತು ಅಮೂಲ್ಯ ರತ್ನಗಳ ಖರೀದಿಯ ಮೇಲೆ ₹ 1000 ಮೊತ್ತದ ಗಿಫ್ಟ್ ವೋಚರ್‌; ₹ 10 ಸಾವಿರ ಮೌಲ್ಯದ ಬೆಳ್ಳಿ ಸಾಮಗ್ರಿ ಖರೀದಿಯ ಮೇಲೆ ₹ 500 ಮೊತ್ತದ ಗಿಫ್ಟ್ ವೋಚರ್‌ ಬಹುಮಾನವಾಗಿ ನೀಡಲಾಗುತ್ತದೆ. ಎಸ್‌ಬಿಐ ಕಾರ್ಡ್‌ ಹೊಂದಿರುವವರಿಗೆ ಹೆಚ್ಚುವರಿಯಾಗಿ ಶೇಕಡ 5ರಷ್ಟು ಕ್ಯಾಶ್‌ಬ್ಯಾಕ್‌ ಗಳಿಸುವ ಅವಕಾಶ ಇದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ನವೆಂಬರ್‌ 5ರವರೆಗೆ ಇದು ಜಾರಿಯಲ್ಲಿ ಇರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು