ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಲ್ಲಾಸ್‌, ಅಟ್ಲಾಂಟದಲ್ಲಿ ಜೋಯಾಲುಕ್ಕಾಸ್‌ ಹೊಸ ಮಳಿಗೆ

Published 15 ಮೇ 2024, 17:37 IST
Last Updated 15 ಮೇ 2024, 17:37 IST
ಅಕ್ಷರ ಗಾತ್ರ

ಬೆಂಗಳೂರು: ಅಮೆರಿಕದಲ್ಲಿ ಜೋಯಾಲುಕ್ಕಾಸ್‌ ಕಂಪನಿಯು ಎರಡು ಹೊಸ ಮಳಿಗೆ ಹಾಗೂ ಮೂರು ನವೀಕೃತ ಮಳಿಗೆಗಳ ಕಾರ್ಯಾರಂಭಕ್ಕೆ ಸಜ್ಜಾಗಿದೆ. 

ಮೇ 18ರಂದು ಹೌಸ್ಟನ್‌ನಲ್ಲಿ ನವೀಕೃತ ಮಳಿಗೆಯ ಉದ್ಘಾಟನೆ ನಡೆಯಲಿದೆ. ಮೇ 26ರಂದು ಡಲ್ಲಾಸ್‌ ಹಾಗೂ ಜೂನ್ 2ರಂದು ಅಟ್ಲಾಂಟದಲ್ಲಿ ಹೊಸ ಮಳಿಗೆ ಲೋಕಾರ್ಪಣೆಗೊಳ್ಳಲಿದೆ. ಜೂನ್‌ 9ರಂದು ಷಿಕಾಗೊ ಹಾಗೂ ಜೂನ್‌ 15ರಂದು ನ್ಯೂಜೆರ್ಸಿಯಲ್ಲಿ ನವೀಕೃತ ಮಳಿಗೆಗಳ ಉದ್ಘಾಟನೆ ನಡೆಯಲಿದೆ. 

ಜೋಯಾಲುಕ್ಕಾಸ್‌ ಸಮೂಹದ ಅಧ್ಯಕ್ಷ ಜೋಯ್‌ ಆಲುಕ್ಕಾಸ್‌ ಅವರ ನೇತೃತ್ವದಡಿ ಅಮೆರಿಕದಲ್ಲಿ ಬ್ರ್ಯಾಂಡ್‌ನ ವಿಸ್ತರಣೆಯ ಕಾರ್ಯತಂತ್ರದ ಭಾಗವಾಗಿ ಮಹತ್ವದ ಹೆಜ್ಜೆ ಇದಾಗಿದೆ ಎಂದು ಕಂಪನಿ ತಿಳಿಸಿದೆ.

‘ಅಮೆರಿಕದ ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಕಂಪನಿಯು ಮುಂದಾಗಿದೆ’ ಎಂದು ಜೋಯಾಲುಕ್ಕಾಸ್‌ ಸಮೂಹದ ವ್ಯವಸ್ಥಾಪಕ ನಿರ್ದೇಶಕ ಜಾನ್‌ ಪಾಲ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT