ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ಣಾಟಕ ಬ್ಯಾಂಕ್‌: ಪಿಒಎಸ್‌ಗಳಲ್ಲಿ ನಗದು

Last Updated 10 ಜುಲೈ 2018, 17:53 IST
ಅಕ್ಷರ ಗಾತ್ರ

ಮಂಗಳೂರು: ಡೆಬಿಟ್‌ ಮತ್ತು ಕ್ರೆಡಿಟ್‌ ಕಾರ್ಡ್‌ಗಳ ಮೂಲಕ ಹಣ ಪಡೆಯುವ ವ್ಯವಸ್ಥೆ ಹೊಂದಿರುವ ಪಾಯಿಂಟ್‌ ಆಫ್‌ ಸೇಲ್‌ (ಪಿಒಎಸ್‌) ಯಂತ್ರಗಳನ್ನು ಅಳವಡಿಸಿಕೊಂಡಿರುವ ವ್ಯಾಪಾರ, ವಹಿವಾಟು ತಾಣಗಳಲ್ಲಿ ಬ್ಯಾಂಕ್‌ ಗ್ರಾಹಕರಿಗೆ ಹಣ ಒದಗಿಸುವ ‘ಕ್ಯಾಷ್‌ ಆ್ಯಟ್‌ ಪಿಒಎಸ್‌’ ಸೇವೆಗೆ ಕರ್ಣಾಟಕ ಬ್ಯಾಂಕ್‌ ಚಾಲನೆ ನೀಡಿದೆ.

ಬ್ಯಾಂಕ್‌ನ ಪ್ರಧಾನ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಎಂ.ಎಸ್‌.ಮಹಾಬಲೇಶ್ವರ ಅವರು ಈ ಸೇವೆಗೆ ಚಾಲನೆ ನೀಡಿದರು. ಬ್ಯಾಂಕ್‌ನ ಪಿಒಎಸ್‌ ಯಂತ್ರ ಹೊಂದಿರುವ 13,100ಕ್ಕೂ ಹೆಚ್ಚು ಮಳಿಗೆಗಳಲ್ಲಿ ಈ ಸೇವೆ ಲಭ್ಯವಾಗಲಿದೆ.

ಭಾರತೀಯ ರಿಸರ್ವ್ ಬ್ಯಾಂಕ್‌ ನಿರ್ದೇಶನದಂತೆ ಬ್ಯಾಂಕ್‌ ಈ ಸೇವೆ ಆರಂಭಿಸಿದೆ. ಒಬ್ಬ ಗ್ರಾಹಕ ಡೆಬಿಟ್‌ ಅಥವಾ ಕ್ರೆಡಿಟ್‌ ಕಾರ್ಡ್‌ ಬಳಸಿ ಮಹಾನಗರಗಳು ಮತ್ತು ಎರಡನೇ ಹಂತದ ನಗರಗಳಲ್ಲಿ ದಿನಕ್ಕೆ ₹ 1,000 ಹಾಗೂ ಸಣ್ಣ ನಗರ, ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ
₹ 2,000ದವರೆಗೂ ಡ್ರಾ ಮಾಡಲು ಅವಕಾಶ ನೀಡಲಾಗಿದೆ. ಇದಕ್ಕಾಗಿ ಪಿಒಎಸ್‌ ಯಂತ್ರ ಹೊಂದಿರುವವರು ಶುಲ್ಕ ಪಡೆಯುವಂತಿಲ್ಲ. ಬ್ಯಾಂಕ್‌ ಶೇ 1ರಷ್ಟು ಅಥವಾ ಗರಿಷ್ಠ ₹ 10ರದ ವರೆಗೆ ಶುಲ್ಕ ವಿಧಿಸಲಿದೆ.

‘ಕ್ಯಾಷ್‌ ಆ್ಯಟ್‌ ಪಿಒಎಸ್‌’ ಸೇವೆಯು ಹಣದ ಚಲಾವಣೆಯನ್ನು ಸರಾಗಗೊಳಿಸುವ ಪ್ರಯತ್ನವಾಗಿದೆ. ಇದು ಚಿಕ್ಕ ಎಟಿಎಂನಂತೆ ಕೆಲಸ ಮಾಡಲಿದೆ. ಜನರು ಸುಲಭವಾಗಿ ಹಣ ಪಡೆಯಬಹುದು. ಪಿಒಎಸ್‌ ಹೊಂದಿರುವವರು ವಹಿವಾಟಿನಿಂದ ಸಂಗ್ರಹವಾಗುವ ಹಣವನ್ನು ಖಾತೆಗೆ ತುಂಬಲು ಬ್ಯಾಂಕ್‌ಗೆ ಬರುವುದೂ ತಪ್ಪುತ್ತದೆ. ಅವರಿಗೆ ತುಸು ಆದಾಯವೂ ಲಭಿಸುತ್ತದೆ’ ಎಂದು ಮಹಾಬಲೇಶ್ವರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT