ಬೆಂಗಳೂರು: ಕರ್ಣಾಟಕ ಬ್ಯಾಂಕಿನ ಪ್ರಥಮ ಡಿಜಿ ಬ್ರ್ಯಾಂಚ್ (ಬ್ಯಾಂಕಿನ 821ನೇ ಶಾಖೆ) ಅನ್ನು ನಗರದ ನೆಟ್ಟಕಲ್ಲಪ್ಪ ವೃತ್ತದಲ್ಲಿ ಮಂಗಳವಾರ ಪ್ರಾರಂಭಿಸಲಾಗಿದೆ.
ಅಧ್ಯಕ್ಷತೆ ವಹಿಸಿದ್ದ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಮಹಾಬಲೇಶ್ವರ ಎಂ.ಎಸ್. ಮಾತನಾಡಿ, ‘ಬ್ಯಾಂಕಿನ 821ನೇ ಶಾಖೆಯನ್ನು ಸಂಪೂರ್ಣ ಡಿಜಿ ಬ್ರ್ಯಾಂಚ್ ಅನ್ನಾಗಿ ರೂಪಿಸಿ, ಗ್ರಾಹಕ ಸೇವೆಗೆ ಅರ್ಪಿಸುತ್ತಿದ್ದೇವೆ. ದೇಶವ್ಯಾಪಿಯಾಗಿ ಹಬ್ಬಿರುವ ಡಿಜಿಟಲ್ ತಂತ್ರಜ್ಞಾನ ಬಹು ಜನೋಪಯೋಗಿಯಾಗಿದೆ. ಜನಪರ ಕಾಳಜಿ ಹೊಂದಿರುವ ನಮ್ಮ ಬ್ಯಾಂಕ್, ಆಧುನಿಕ ಆವಿಷ್ಕಾರಗಳನ್ನು ಒಳಗೊಂಡ ಈ ಡಿಜಿ ಬ್ರ್ಯಾಂಚ್ ಅನ್ನು ರೂಪಿಸಿದೆ’ ಎಂದರು.
‘ತಂತ್ರಜ್ಞಾನದ ನೆರವಿನಿಂದ ರೂಪಿತವಾದ ಅನೇಕ ಸೌಲಭ್ಯಗಳು ಕ್ಷಣಾರ್ಧದಲ್ಲಿಯೇ ಇಲ್ಲಿ ಗ್ರಾಹಕರಿಗೆ ಲಭ್ಯವಾಗುತ್ತವೆ. ತ್ವರಿತ ಖಾತೆ ತೆರೆಯುವಿಕೆ, ತಕ್ಷಣ ಡೆಬಿಟ್ ಕಾರ್ಡ್ ಪಡೆಯುವ ಸೌಲಭ್ಯ, ಇಂಟರ್‌ನೆಟ್ ಬ್ಯಾಂಕಿಂಗ್, ತ್ವರಿತ ಮೊಬೈಲ್ ಬ್ಯಾಂಕಿಂಗ್, ಪಾಸ್‌ಬುಕ್ ಪ್ರಿಂಟರ್, ಇನ್‌ಸ್ಟಂಟ್ ಎಸ್‌ಎಂಎಸ್ ಮಾಹಿತಿ ಕಿಯೋಸ್ಕ್, ಇನ್ನಿತರ ಎಲ್ಲ ಡಿಜಿಟಲ್ ಸೇವೆಗಳು ಲಭ್ಯವಾಗಲಿವೆ’ ಎಂದು ಹೇಳಿದರು.
‘ಬಯೊಮೆಟ್ರಿಕ್ ತಂತ್ರಜ್ಞಾನ, ‘ಆಧಾರ್’ನಲ್ಲಿ ಲಭ್ಯವಿರುವ ಮಾಹಿತಿ ಹಾಗೂ ರೋಬೊಟಿಕ್ ತಂತ್ರಜ್ಞಾನಗಳ ಮೇಲೆ ರೂಪಿತವಾದ ಈ ಡಿಜಿ
ಶಾಖೆ, ಗ್ರಾಹಕರಿಗೆ ಸರಳ, ಸುಲಲಿತ, ನಿರಂತರ ಹಾಗೂ ಹರ್ಷದಾಯಕ ಬ್ಯಾಂಕಿಂಗ್ ವ್ಯವಹಾರವನ್ನು ನೀಡಲಿದೆ. ಬದಲಾಗುತ್ತಿರುವ ಈ ತಂತ್ರಜ್ಞಾನದ ಯುಗದಲ್ಲಿ ಬ್ಯಾಂಕ್ ಎಲ್ಲಾ ನೂತನ ಆವಿಷ್ಕಾರಗಳನ್ನು ಮೈಗೂಡಿಸಿಕೊಳ್ಳುತ್ತಿದೆ. ತನ್ನ ಮೂಲ ಆಶಯಗಳಿಗೆ ಅನುಗುಣವಾಗಿ ಮೌಲ್ಯಯುತ ಸೇವೆಯನ್ನು ಗ್ರಾಹಕರಿಗೆ ನೀಡಲಿದೆ’ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.