ಮಂಗಳೂರು: ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಕರ್ಣಾಟಕ ಬ್ಯಾಂಕ್ ₹ 300.63 ಕೋಟಿ ನಿವ್ವಳ ಲಾಭ ದಾಖಲಿಸಿದೆ. ಇದು ಹಿಂದಿನ ವರ್ಷದ ಇದೇ ಅವಧಿಯ ಲಾಭಕ್ಕೆ ಹೋಲಿಸಿದರೆ ಶೇಕಡ 105.32ರಷ್ಟು ಹೆಚ್ಚು.

ಹಿಂದಿನ ವರ್ಷದ ಅಕ್ಟೋಬರ್–ಡಿಸೆಂಬರ್ ಅವಧಿಯಲ್ಲಿ ನಿವ್ವಳ ಲಾಭವು ₹ 146.42 ಕೋಟಿ ಆಗಿತ್ತು. ತೃತೀಯ ತ್ರೈಮಾಸಿಕದ ಅಂತ್ಯಕ್ಕೆ (ಒಟ್ಟು ಒಂಬತ್ತು ತಿಂಗಳ ಅವಧಿಯಲ್ಲಿ) ವಾರ್ಷಿಕ ಶೇ 118.68ರ ವೃದ್ಧಿ ದರದೊಂದಿಗೆ ₹ 826.15 ಕೋಟಿ ನಿವ್ವಳ ಲಾಭ ಗಳಿಸಿ ದಾಖಲೆ ಮಾಡಿದೆ ಎಂದು ಪ್ರಕಟಣೆ ತಿಳಿಸಿದೆ. ಹಿಂದಿನ ವರ್ಷ ಇದೇ ಅವಧಿಯಲ್ಲಿ ನಿವ್ವಳ ಲಾಭ ₹ 377.79 ಕೋಟಿ ಆಗಿತ್ತು.

ಗುರುವಾರ ಇಲ್ಲಿನ ಪ್ರಧಾನ ಕಚೇರಿಯಲ್ಲಿ ನಡೆದ ಆಡಳಿತ ಮಂಡಳಿಯ ಸಭೆಯಲ್ಲಿ 2022-23ನೇ ಸಾಲಿನ ತೃತೀಯ ತ್ರೈಮಾಸಿಕದ ಹಣಕಾಸು ವರದಿಯನ್ನು ಅಂಗೀಕರಿಸಲಾಯಿತು.

‘ಬ್ಯಾಂಕಿನ ಸ್ವತ್ತುಗಳ ಗುಣಮಟ್ಟದಲ್ಲೂ ಗಮನಾರ್ಹ ವೃದ್ಧಿ ಆಗಿದೆ. ಬ್ಯಾಂಕ್‌ನ ಸ್ಥೂಲ ಅನುತ್ಪಾದಕ ಸ್ವತ್ತುಗಳು 8 ಅಂಶಗಳಷ್ಟು ಕಡಿಮೆಯಾಗಿದ್ದು, ಶೇ 3.28ಕ್ಕೆ ಇಳಿಕೆಯಾಗಿದೆ. ನಿವ್ವಳ ಅನುತ್ಪಾದಕ ಆಸ್ತಿಯು ಶೇ 1.66ಕ್ಕೆ ಇಳಿದಿದೆ’ ಎಂದು ಪ್ರಕಟಣೆ ಹೇಳಿದೆ.

2022ರ ಡಿಸೆಂಬರ್ ಅಂತ್ಯಕ್ಕೆ ಬ್ಯಾಂಕ್‌ನ ಒಟ್ಟು ವ್ಯವಹಾರವು ಶೇ 9.79ರ ದರದಲ್ಲಿ ವೃದ್ಧಿ ಕಂಡಿದ್ದು, ₹1,47,128 ಕೋಟಿಗೆ ಏರಿದೆ. ಬ್ಯಾಂಕಿನ ಠೇವಣಿಗಳು ಶೇ 7.86ರ ದರದಲ್ಲಿ ವೃದ್ಧಿ ಕಂಡು, ₹ 84,596.40 ಕೋಟಿ ಆಗಿದೆ. ಮುಂಗಡ ಶೇ 12.51ರಷ್ಟು ಏರಿಕೆಯಾಗಿ ₹ 62,532.11 ಕೋಟಿಗೆ ತಲುಪಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.