ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2022–23ರ ನಡುವೆ ಸೀಮೆಎಣ್ಣೆ ಬಳಕೆ ಶೇ 26ರಷ್ಟು ಇಳಿಕೆ

Published 17 ಮಾರ್ಚ್ 2024, 13:10 IST
Last Updated 17 ಮಾರ್ಚ್ 2024, 13:10 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿ ಸೀಮೆಎಣ್ಣೆ ಬಳಕೆ ಪ್ರಮಾಣವು 2013–14ರಿಂದ 2022–23ರ ನಡುವೆ ಶೇ 26ರಷ್ಟು ಇಳಿಕೆಯಾಗಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್‌ಎಸ್‌ಒ) ತಿಳಿಸಿದೆ.

ಕೇಂದ್ರ ಸರ್ಕಾರವು ನವೀಕರಿಸಬಹುದಾದ ಇಂಧನ ನೀತಿಗೆ ಒತ್ತು ನೀಡಿದೆ. ಹಾಗಾಗಿ, ಈ ಅವಧಿಯಲ್ಲಿ ಸೀಮೆಎಣ್ಣೆ ಬಳಕೆ ಕುರಿತಾದ ಸಂಯುಕ್ತ ವಾರ್ಷಿಕ ಬೆಳವಣಿಗೆ ದರವು (ಸಿಎಜಿಆರ್‌) ಇಳಿಕೆಯಾಗಿದೆ ಎಂದು ಎನ್‌ಎಸ್‌ಒ ಇತ್ತೀಚೆಗೆ ಪ್ರಕಟಿಸಿರುವ ‘ಭಾರತದ ಇಂಧನದ ಅಂಕಿ–ಅಂಶ 2024’ ವರದಿ ತಿಳಿಸಿದೆ. 

2022–23ರಲ್ಲಿ ಪೆಟ್ರೋಲಿಯಂ ಉತ್ಪನ್ನ‌ಗಳ ಪೈಕಿ ಹೈ ಸ್ಪೀಡ್‌ ಡೀಸೆಲ್‌ ಆಯಿಲ್ (ಎಚ್‌ಎಸ್‌ಡಿಒ–ಡೀಸೆಲ್‌) ಬಳಕೆ ಪ್ರಮಾಣ ಹೆಚ್ಚಿದೆ (ಶೇ 38.52). 2021–22ನೇ ಸಾಲಿಗೆ ಹೋಲಿಸಿದರೆ ಬಳಕೆ ಪ್ರಮಾಣದಲ್ಲಿ ಶೇ 12.05ರಷ್ಟು ಏರಿಕೆ ಆಗಿದೆ.

ಪೆಟ್ರೋಲ್‌ ಬಳಕೆಯು ಶೇ 13.38ರಷ್ಟು ಇದ್ದರೆ, ಕಲ್ಲಿದ್ದಲಿಗೆ ಪರ್ಯಾಯವಾಗಿ ಬಳಕೆಯಾಗುವ ಪೆಟ್ರೋಲಿಯಂ ಕೋಕ್ ಬಳಕೆಯು ಶೇ 28.68ರಷ್ಟಿದೆ. ಹೈ ಸ್ಪೀಡ್‌ ಡೀಸೆಲ್‌ (ಎಚ್‌ಎಸ್‌ಡಿ–ಡೀಸೆಲ್) ಬಳಕೆಯು ಶೇ 12.05ರಷ್ಟು ಹೆಚ್ಚಳವಾಗಿದೆ ಎಂದು ವರದಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT