ಶನಿವಾರ, ನವೆಂಬರ್ 23, 2019
17 °C
ಕೃಷಿ ಖಾತೆ ರಾಜ್ಯ ಸಚಿವ ಪುರುಶೋತ್ತಮ್ ರುಪಾಲ

‘ಮುಂಗಾರು ಉತ್ಪಾದನೆ ಹೆಚ್ಚಲಿದೆ’

Published:
Updated:

ನವದೆಹಲಿ: ‘ಮುಂಗಾರು ಹಂಗಾಮು ಅವಧಿಯಲ್ಲಿ ಆಹಾರ ಧಾನ್ಯಗಳ ಉತ್ಪಾದನೆ ಕಳೆದ ವರ್ಷಕ್ಕಿಂತಲೂ ಹೆಚ್ಚಿಗೆ ಇರಲಿದೆ’ ಎಂದು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವ ಪುರುಷೋತ್ತಮ ರೂಪಾಲ್ ತಿಳಿಸಿದ್ದಾರೆ.

ಕಳೆದ ವರ್ಷ ಮುಂಗಾರು ಹಂಗಾಮಿನಲ್ಲಿ ₹ 14.17 ಕೋಟಿ ಟನ್‌ ಉತ್ಪಾದನೆ ಆಗಿತ್ತು.

‘ಪ್ರವಾಹದಿಂದಾಗಿ ಕೆಲವು ರಾಜ್ಯಗಳಲ್ಲಿ ಮುಂಗಾರು ಬೆಳೆಗೆ ಹಾನಿಯಾಗಿದೆ. ಆದರೆ ಒಟ್ಟಾರೆ ಉತ್ಪಾದನೆಯ ಮೇಲೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ’ ಎಂದಿದ್ದಾರೆ.

ಹಿಂಗಾರು ಕೃಷಿಯ ಕುರಿತಾದ ರಾಷ್ಟ್ರೀಯ ಸಮ್ಮೇಳನದಲ್ಲಿ ಸಂದರ್ಭದಲ್ಲಿ ಅವರು ಮಾತನಾಡಿದರು.

‘ಖಾದ್ಯತೈಲ ಆಮದು ತಗ್ಗಿಸಲು ಉತ್ಪಾದನೆ ಹೆಚ್ಚಿಸುವ ಅಗತ್ಯ ಇದೆ. ರಾಜ್ಯಗಳು ರೈತರಿಗೆ ಉತ್ತೇಜನ ನೀಡುವ ಕೆಲಸ ಮಾಡಬೇಕಿದೆ.

‘ಬೆಳೆ ವಿಮೆ ಪರಿಹಾರವನ್ನು ತ್ವರಿತಗತಿಯಲ್ಲಿ ಇತ್ಯರ್ಥಪಡಿಸುವಂತೆ ಸಚಿವಾಲಯದ ಅಧಿಕಾರಿಗಳು ಮತ್ತು ರಾಜ್ಯ ಸರ್ಕಾರಗಳಿಗೆ’ ಸೂಚನೆ ನೀಡಿದ್ದಾರೆ. 

ಪ್ರತಿಕ್ರಿಯಿಸಿ (+)