ಸೋಮವಾರ, ಆಗಸ್ಟ್ 10, 2020
22 °C

ಹಬ್ಬಕ್ಕೆ ಕಿಯಾ ಸಾನೆಟ್‌ ಎಸ್‌ಯುವಿ: ಫರ್ಸ್ಟ್‌ ಲುಕ್‌ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

kia

ನವದೆಹಲಿ: ಕಿಯಾ ಮೋಟರ್ ಇಂಡಿಯಾ ಕಂಪನಿಯು ತನ್ನ ಹೊಸ ಕಾಂಪ್ಯಾಕ್ಟ್‌ ಎಸ್‌ಯುವಿ ‘ಕಿಯಾ ಸಾನೆಟ್‌’ನ ಅಧಿಕೃತ ಚಿತ್ರವನ್ನು ಗುರುವಾರ ಬಿಡುಗಡೆ ಮಾಡಿದೆ. ಹಬ್ಬದ ಅವಧಿಯಲ್ಲಿ ವಾಹನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಹೇಳಿದೆ.

ಸೆಲ್ಟೋಸ್‌ ಬಳಿಕ ಭಾರತದಲ್ಲಿಯೇ ತಯಾರಿಸಿ ಯೋಜನೆಯಡಿ ತಯಾರಾಗಿರುವ ಕಂಪನಿಯ ಎರಡನೇ ಕಾರು‌ ಇದಾಗಿದೆ. ದೆಹಲಿಯಲ್ಲಿ ನಡೆದಿದ್ದ ಆಟೊ ಎಕ್ಸ್‌ಪೊದಲ್ಲಿ ಸಾನೆಟ್‌ ಕಾನ್ಸೆಪ್ಟ್‌ ಅನ್ನು ಮೊದಲಿಗೆ ಅನಾವರಣಗೊಳಿಸಲಾಗಿತ್ತು. ಆ ಬಳಿಕ ಇದೀಗ ಈ ಎಸ್‌ಯುವಿ ಹೇಗಿರಲಿದೆ ಎನ್ನುವ ಚಿತ್ರವನ್ನು ಬಿಡುಗಡೆ ಮಾಡುವ ಮೂಲಕ ಕಂಪನಿ ಕೆಲವು ಮಾಹಿತಿಗಳನ್ನು ಹಂಚಿಕೊಂಡಿದೆ.

ಸಾನೆಟ್‌ ಮೂಲಕ ಕಾಂಪ್ಯಾಕ್ಟ್‌ ಎಸ್‌ಯುವಿ ವಿಭಾಗದಲ್ಲಿ ಹೊಸ ಮಾನದಂಡ ನಿಗದಿಪಡಿಸುವ ಗುರಿಯನ್ನು ಇಟ್ಟುಕೊಂಡಿರುವುದಾಗಿ ಕಂಪನಿ ಹೇಳಿಕೊಂಡಿದೆ.

ಯುವ ಸಮೂಹಕ್ಕೆ ಇದು ಅತ್ಯುತ್ತಮವಾದ ಎಸ್‌ಯುವಿ ಆಗಲಿದೆ. ಅತ್ಯಾಕರ್ಷಕ ವಿನ್ಯಾಸ, ಉತ್ತಮ ಗುಣಮಟ್ಟ, ಹೊಸ ವೈಶಿಷ್ಟ್ಯ, ಸುರಕ್ಷತಾ ಸಾಧನಗಳೊಂದಿಗೆ ಭಾರತದ ಗ್ರಾಹಕರಿಗೆ ಇಷ್ಟವಾಗುವ ವಿಶ್ವಾಸವಿದೆ ಎಂದು ಕಿಯಾ ಮೋಟರ್ಸ್‌ ಕಾರ್ಪೊರೇಷನ್‌ನ ಡಿಸೈನ್‌ ಸೆಂಟರ್‌ನ ಹಿರಿಯ ಉಪಾಧ್ಯಕ್ಷ ಕರೀಮ್‌ ಹಬಿಬ್‌ ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು