ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿಯಾ ಮೋಟರ್ಸ್ ಸೆಲ್ಟೊಸ್ ಮಾರುಕಟ್ಟೆಗೆ

Last Updated 23 ಆಗಸ್ಟ್ 2019, 19:43 IST
ಅಕ್ಷರ ಗಾತ್ರ

ಬೆಂಗಳೂರು: ವಾಹನ ತಯಾರಿಕಾ ಕಂಪನಿ ಕಿಯಾ ಮೋಟರ್ಸ್, ಮಧ್ಯಮ ಗಾತ್ರದ ಎಸ್‌ಯುವಿ ವಿಭಾಗದ ಮೊದಲ ವಾಹನವನ್ನು ಕರ್ನಾಟಕ ಮಾರುಕಟ್ಟೆಗೆ ಶುಕ್ರವಾರ ಪರಿಚಯಿಸಿತು.

ಈ ಎಸ್‌ಯುವಿನಲ್ಲಿ 2 ಟ್ರಿಮ್‌ ಲೈನ್‌ (ಜಿಟಿ ಲೈನ್ ಹಾಗೂ ಟೆಕ್ ಲೈನ್) ಸೌಲಭ್ಯಗಳಿರುವ ವಾಹನ ಇದಾಗಿದ್ದು, 16 ಮಾದರಿಗಳಲ್ಲಿ, 8 ಮೊನೊಟೋನ್ ಮತ್ತು 5 ಡ್ಯುಯಲ್ ಟೋನ್‌ ಬಣ್ಣಗಳಲ್ಲಿ,ಪೆಟ್ರೋಲ್‌, ಟರ್ಬೊ ಪೆಟ್ರೋಲ್ ಮತ್ತು ಡೀಸೆಲ್‌ ಮಾದರಿಗಳಲ್ಲಿ ಲಭ್ಯವಿದೆ. ಈಗಾಗಲೇ 32 ಸಾವಿರಕ್ಕೂ ಹೆಚ್ಚು ಗ್ರಾಹಕರು ಮುಂಗಡ ಬುಕಿಂಗ್ ಮಾಡಲು ಆಸಕ್ತಿ ತೋರಿದ್ದಾರೆ ಎಂದು ಸಂಸ್ಥೆ ಮಾಹಿತಿ ನೀಡಿದೆ.

‘ಸೆಲ್ಸೋಸ್‌ ಎಸ್‌ಯುವಿ ನಮ್ಮ ಸಂಸ್ಥೆಯ ಪ್ರತಿಷ್ಠಿತ ವಾಹನಗಳಲ್ಲಿ ಒಂದು. ಹೆಚ್ಚು ಕಾಳಜಿ ಮತ್ತು ಶ್ರಮ ವಹಿಸಿ ಇದನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿದ್ದೇವೆ. ಇದು ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದ್ದು, ವಿನ್ಯಾಸ, ಗುಣಮಟ್ಟಕ್ಕೆ ಹೆಚ್ಚು ಆದ್ಯತೆ ನೀಡಲಾಗಿದೆ’ ಎಂದು ಕಿಯಾ ಮೋಟಾರ್ಸ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೂಖ್ಯುಂ ಶಿಮ್ಶುಕ್ರವಾರ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಸುಧಾರಿತ ತಂತ್ರಜ್ಞಾನ ಹೊಂದಿರುವ ವಿಶಿಷ್ಟ ಎಂಜಿನ್ ಅಳವಡಿಸಿದ್ದೇವೆ. ಎಲ್ಲ ಬಗೆಯ ಗ್ರಾಹಕರಿಗೂ ಈ ಎಸ್‌ಯುವಿ ಇಷ್ಟವಾಗುತ್ತದೆ ಎಂಬ ನಂಬಿಕೆ ಇದೆ. ಭಾರತದ ಒಟ್ಟಾರೆ ಎಸ್‌ಯುವಿ ಮಾರುಕಟ್ಟೆಯಲ್ಲಿ ಇದು ಹೊಸ ಭಾಷ್ಯ ಬರೆಯಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಎಕ್ಸ್‌ಷೋರೂಂ ಆರಂಭಿಕ ಬೆಲೆ ₹9.69 ಲಕ್ಷ ಇದೆ.

ಪ್ರಮುಖ ವೈಶಿಷ್ಟ್ಯಗಳು

*ಬಿಎಸ್–6 ಎಂಜಿನ್
*ನಾರ್ಮಲ್‌, ಇಕೊ ಮತ್ತು ಸ್ಪೋರ್ಟ್ ಮೋಡ್‌ ಆಯ್ಕೆ ಅವಕಾಶ
*ಎಲ್‌ಇಡಿ ದೀಪಗಳು
*ಮಾಹಿತಿಗೆ ಎಚ್‌ಡಿ ಗುಣಮಟ್ಟದ ಪರದೆ ಇರುವ ಡಿಜಿಟಲ್ ಪರದೆ
*ಅಪಘಾತಗಳನ್ನು ತಪ್ಪಿಸಲು ಕ್ರೂಯಿಸ್‌ ಕಂಟ್ರೋಲ್ ವ್ಯವಸ್ಥೆ
*ಸುರಕ್ಷತೆಗಾಗಿ ಆರು ಏರ್‌ಬ್ಯಾಗ್‌ಗಳು ಮತ್ತು ಡಿಸ್ಕ್‌ಬ್ರೇಕ್‌ಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT