ಬೆಂಗಳೂರು: ಫುಡ್ ಟೆಕ್ ಉದ್ಯಮದಲ್ಲಿ ಮುಂಚೂಣಿಯಲ್ಲಿರುವ ಕೌಜಿನಾ, ನ್ಯೂ ಸಿಲ್ಕ್ ರೂಟ್ ಪ್ರೈವೆಟ್ ಈಕ್ವಿಟಿಯಿಂದ ದಕ್ಷಿಣ ಭಾರತದ ಪ್ರಮುಖ ರೆಸ್ಟೋರೆಂಟ್ ‘ವಾಸುದೇವ್ ಅಡಿಗಾಸ್ ಬ್ರ್ಯಾಂಡ್’ ಅನ್ನು ಸ್ವಾಧೀನಪಡಿಸಿಕೊಂಡಿದೆ.

ಈಗ ಕೌಜಿನಾ, ವಾಸುದೇವ್ ಅಡಿಗಾಸ್ ಬ್ರ್ಯಾಂಡ್ ಅನ್ನು ದೇಶದಾದ್ಯಂತ ವಿಸ್ತರಿಸಲು ಯೋಜಿಸಿದೆ.

ವಾಸುದೇವ್ ಅಡಿಗಾಸ್ ಬ್ರ್ಯಾಂಡ್, ರಾಮೇಶ್ವರಂ ಕೆಫೆಯಂತಹ ಹೊಸ ಸಂಸ್ಥೆ ಬರುವ ಮೊದಲು ದಕ್ಷಿಣ ಭಾರತೀಯ ಪಾಕ ಪದ್ಧತಿಗೆ ಹೆಸರುವಾಸಿಯಾಗಿತ್ತು. ಗುಣಮಟ್ಟದ ದಕ್ಷಿಣ ಭಾರತೀಯ ಆಹಾರ ಬಯಸುವ ಗ್ರಾಹಕರ ನೆಚ್ಚಿನ ಆಯ್ಕೆಯಾಗಿತ್ತು.

ಬೆಂಗಳೂರಿನಾದ್ಯಂತ ಪ್ರಸಿದ್ಧ ದರ್ಶಿನಿ ಸಂಸ್ಕೃತಿಯ ಪ್ರವರ್ತಕರಾಗಿದ್ದ ವಾಸುದೇವ ಅಡಿಗರು ನಂಬಿಕೆ ಮತ್ತು ವಿಶ್ವಾಸಾರ್ಹತೆ ಕಾಪಾಡಿಕೊಂಡು ಬರುವ ಮೂಲಕ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದ್ದರು ಎಂದು ಕಂಪನಿ ತಿಳಿಸಿದೆ.

‘ಕೆ.ಎನ್. ವಾಸುದೇವ್ ಅಡಿಗ ಮತ್ತು ಅವರ ತಂಡವು ನಿರ್ಮಿಸಿದ ಅದ್ಭುತ ಪರಂಪರೆ, ಅವರ ದೂರದೃಷ್ಟಿ ಮತ್ತು ಬದ್ಧತೆಯಿಂದಾಗಿ ಆಹಾರ ಉದ್ಯಮದಲ್ಲಿ
ಗುಣಮಟ್ಟದ ಬ್ರ್ಯಾಂಡ್ ಆಗಿ ಹೊರಹೊಮ್ಮಿದೆ’ ಎಂದು ಕೌಜಿನಾದ ಸಹ-ಸಂಸ್ಥಾಪಕ ಮತ್ತು ಸಿಒಒ ಮಹೇಶ್ ಮಡಿಯಾಲ ಹೇಳಿದ್ದಾರೆ.

ವಾಸುದೇವ್ ಅಡಿಗಾಸ್ ಬ್ರ್ಯಾಂಡ್ ವಿಸ್ತರಣೆಯಲ್ಲಿ ಪಾಲುದಾರರಾಗಲು ಕೌಜಿನಾ, ಕರ್ನಾಟಕದಲ್ಲಿ ಫ್ರಾಂಚೈಸಿಗಳನ್ನು ಆಹ್ವಾನಿಸಿದೆ. ಇದಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಬ್ರ್ಯಾಂಡ್ ಅನ್ನು ಮರುಪ್ರಾರಂಭಿಸಲು ಹೊಸ ಫ್ರಾಂಚೈಸಿಗಳ ಜೊತೆಗೆ ದಕ್ಷಿಣ ಭಾರತೀಯ ರೆಸ್ಟೋರೆಂಟ್ಗಳಿಂದಲೂ ಆಹ್ವಾನ ನೋಡುತ್ತಿದ್ದೇವೆ. ತಂತ್ರಜ್ಞಾನ, ಕಾರ್ಯಾಚರಣೆ ಮತ್ತು ಬ್ರ್ಯಾಂಡ್ ನಿರ್ವಹಣೆಯಲ್ಲಿ ತನ್ನ ಪರಿಣತಿಯನ್ನು ಬಳಸಿ ಕೌಜಿನಾ ಯಶಸ್ವಿ ಫ್ರ್ಯಾಂಚೈಸ್ ಪಾಲುದಾರಿಕೆಯನ್ನು ಹೊಂದಲು ಬಯಸುತ್ತಿದೆ ಎಂದು ಕಂಪನಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.