ಬಿಎಸ್‌ಇ: ಸ್ಟಾರ್ಟ್‌ಅಪ್‌ಗೆ ಪ್ರತ್ಯೇಕ ವಿಭಾಗ

7

ಬಿಎಸ್‌ಇ: ಸ್ಟಾರ್ಟ್‌ಅಪ್‌ಗೆ ಪ್ರತ್ಯೇಕ ವಿಭಾಗ

Published:
Updated:
Deccan Herald

ನವದೆಹಲಿ : ನವೋದ್ಯಮಗಳಿಗೆ ಷೇರುಪೇಟೆ ವಹಿವಾಟು ಹೆಚ್ಚು ಆಕರ್ಷಕವನ್ನಾಗಿ ಮಾಡಲು, ‘ಎಸ್‌ಎಂಇ’ ವಲಯದಲ್ಲಿ ಪ್ರತ್ಯೇಕ  ವಿಭಾಗ ತೆರೆಯಲು ಮುಂಬೈ ಷೇರುಪೇಟೆ (ಬಿಎಸ್‌ಇ) ನಿರ್ಧರಿಸಿದೆ.

ಐ.ಟಿ, ಜೈವಿಕ ತಂತ್ರಜ್ಞಾನ, ಜೀವ ವಿಜ್ಞಾನ, 3ಡಿ ಪ್ರಿಂಟಿಂಗ್‌, ಬಾಹ್ಯಾಕಾಶ ತಂತ್ರಜ್ಞಾನ, ಇ–ಕಾಮರ್ಸ್‌, ಡ್ರೋನ್‌, ನ್ಯಾನೊ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ ಮತ್ತಿತರ ರಂಗಗಳಲ್ಲಿನ ನವೋದ್ಯಮಗಳು ಷೇರುಪೇಟೆಯಲ್ಲಿ ವಹಿವಾಟು ನಡೆಸಲು ಅನುವು ಮಾಡಿಕೊಡಲು ಕ್ರಮ ಕೈಗೊಳ್ಳಲಾಗಿದೆ.

‘ಸ್ಟಾರ್ಟ್‌ಅಪ್‌ಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಈಗಾಗಲೇ ಅಸ್ತಿತ್ವದಲ್ಲಿ ಇರುವ ಸಣ್ಣ ಮತ್ತು ಮಧ್ಯಮ ಉದ್ದಿಮೆ (ಎಸ್‌ಎಂಇ) ವಲಯದಲ್ಲಿ ಪ್ರತ್ಯೇಕ ಉಪ ವಿಭಾಗ ಆರಂಭಿಸಲಾಗುವುದು’ ಎಂದು ಬಿಎಸ್‌ಇ ತಿಳಿಸಿದೆ.

ನಿಬಂಧನೆ: ಸ್ಟಾರ್ಟ್‌ಅಪ್‌ಗಳು ಷೇರುಪೇಟೆಯಲ್ಲಿ ವಹಿವಾಟು ಆರಂಭಿಸಲು ಕೆಲ ನಿಬಂಧನೆಗಳನ್ನು ವಿಧಿಸಲಾಗಿದೆ.

ಸಣ್ಣ ಉದ್ದಿಮೆ ಸಚಿವಾಲಯ ಇಲ್ಲವೆ ಕೈಗಾರಿಕಾ ನೀತಿ ಮತ್ತು ಉತ್ತೇಜನಾ ಮಂಡಳಿಯಲ್ಲಿ ನೋಂದಾವಣೆಗೊಂಡಿರಬೇಕು. ಸ್ಟಾರ್ಟ್‌ಅಪ್‌ ಎಂದು ನೋಂದಣಿಯಾಗಿರದಿದ್ದರೆ ಅದರ ಮೂಲ ಬಂಡವಾಳ ಕನಿಷ್ಠ ₹ 1 ಕೋಟಿ ಇರಬೇಕು. ಎರಡು ವರ್ಷಗಳಿಂದ ಅಸ್ತಿತ್ವದಲ್ಲಿ ಇರಬೇಕು. ಅರ್ಹ ಹೂಡಿಕೆದಾರರು ಹಣ ತೊಡಗಿಸಿರಬೇಕು ಸೇರಿದಂತೆ ಹಲವು ಷರತ್ತುಗಳನ್ನು ವಿಧಿಸಲಾಗಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !