ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್‌ ಆ್ಯಂಡ್‌ ಟಿ, ಟಿವಿಎಸ್‌ ಲಾಭ ಹೆಚ್ಚಳ

Published 8 ಮೇ 2024, 14:13 IST
Last Updated 8 ಮೇ 2024, 14:13 IST
ಅಕ್ಷರ ಗಾತ್ರ

ನವದೆಹಲಿ: ಎಂಜಿನಿಯರಿಂಗ್‌ ಮತ್ತು ನಿರ್ಮಾಣ ಕಂಪನಿ ಲಾರ್ಸೆನ್‌ ಆ್ಯಂಡ್‌ ಟೊಬ್ರೊ, 2023–24ನೇ ಹಣಕಾಸು ವರ್ಷದಲ್ಲಿ ₹4,396 ಕೋಟಿ ನಿವ್ವಳ ಲಾಭ ಗಳಿಸಿದೆ.

2022–23ರ ಇದೇ ಅವಧಿಯಲ್ಲಿ ₹3,986 ಕೋಟಿ ಲಾಭ ಗಳಿಸಿತ್ತು. ಇದಕ್ಕೆ ಹೋಲಿಸಿದರೆ ಶೇ 10ರಷ್ಟು ಏರಿಕೆಯಾಗಿದೆ. ವರಮಾನವು ₹59,076 ಕೋಟಿಯಿಂದ ₹68,120 ಕೋಟಿಗೆ ಹೆಚ್ಚಳವಾಗಿದೆ ಎಂದು ಕಂಪನಿಯು, ಷೇರುಪೇಟೆಗೆ ತಿಳಿಸಿದೆ.

ಈ ಆರ್ಥಿಕ ವರ್ಷದಲ್ಲಿ ₹3 ಲಕ್ಷ ಕೋಟಿ ಬಂಡವಾಳ ಒಳಹರಿವು ಮತ್ತು ₹4.75 ಲಕ್ಷ ಕೋಟಿ ಮೌಲ್ಯದ ಆರ್ಡರ್‌ಗಳನ್ನು ಸ್ವೀಕರಿಸಲಾಗಿದೆ. ಪ್ರತಿ ಈಕ್ವಿಟಿ ಷೇರಿಗೆ ₹28 ಲಾಭಾಂಶ ನೀಡಲು ಮಂಡಳಿಯು ಶಿಫಾರಸು ಮಾಡಿದೆ ಎಂದು ಕಂಪನಿ ತಿಳಿಸಿದೆ.

ಟಿವಿಎಸ್‌ ಲಾಭ ಹೆಚ್ಚಳ:

ಟಿವಿಎಸ್‌ ಮೋಟರ್‌ ಕಂಪನಿಯು ಮಾರ್ಚ್‌ ತ್ರೈಮಾಸಿಕದಲ್ಲಿ ₹387 ಕೋಟಿ ಲಾಭ ಗಳಿಸಿದೆ. ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಲಾಭದಲ್ಲಿ ಶೇ 15ರಷ್ಟು ಏರಿಕೆಯಾಗಿದೆ. ವಾಹನಗಳ ಮಾರಾಟದ ಹೆಚ್ಚಳದಿಂದಾಗಿ ಲಾಭ ಹೆಚ್ಚಳವಾಗಿದೆ ಎಂದು ಕಂಪನಿ ತಿಳಿಸಿದೆ.

ವರಮಾನವು ₹8,031 ಕೋಟಿಯಿಂದ ₹10,042 ಕೋಟಿಗೆ ಏರಿಕೆಯಾಗಿದೆ. ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ಮಾರಾಟದಲ್ಲಿ ಶೇ 22ರಷ್ಟು ಏರಿಕೆಯಾಗಿದ್ದು, ₹10.63 ಲಕ್ಷ ವಾಹನಗಳು ಮಾರಾಟವಾಗಿವೆ.

2023–24ರ ಫೂರ್ಣ ಹಣಕಾಸು ವರ್ಷದಲ್ಲಿ ಕಂಪನಿಯ ₹41.91 ಲಕ್ಷ ವಾಹನಗಳು ಮಾರಾಟವಾಗಿವೆ. ಹಿಂದಿನ ಇದೇ ಅವಧಿಗೆ ಹೋಲಿಸಿದರೆ ಮಾರಾಟದಲ್ಲಿ ಶೇ 14ರಷ್ಟು ಏರಿಕೆ ಕಂಡಿದೆ. ಲಾಭವು ₹1,329 ಕೋಟಿಯಿಂದ ₹1,686 ಕೋಟಿಗೆ ಹೆಚ್ಚಳವಾಗಿದೆ. ವರಮಾನವು ₹31,974 ಕೋಟಿಯಿಂದ ₹39,145 ಕೋಟಿಗೆ ಏರಿಕೆಯಾಗಿದೆ ಎಂದು ಕಂಪನಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT