ಹೊಸ ವರ್ಷ ಆರಂಭವಾಗುತ್ತಿದ್ದಂತೆ ವಿವಿಧ ಕ್ಷೇತ್ರಗಳಲ್ಲಿ ಒಂದಷ್ಟು ಬದಲಾವಣೆಯಾಗುತ್ತವೆ. ಅದು ನಮ್ಮ ದೈನಂದಿನ ಜೀವನ ಮತ್ತು ಕೆಲಸಗಳ ಮೇಲೆಯೂ ನೇರವಾಗಿ ಪರಿಣಾಮ ಬೀರುತ್ತವೆ. ಅಂತಹವುಗಳಲ್ಲಿ ಬ್ಯಾಂಕಿಂಗ್ ಕ್ಷೇತ್ರವೂ ಒಂದು.

ಸಾಲ, ಹಣಕಾಸಿನ ವ್ಯವಹಾರದ ಮೂಲವಾಗಿರುವ ಬ್ಯಾಂಕಿಂಗ್ ಕ್ಷೇತ್ರದಲ್ಲಿ 2026 ಜನವರಿ 1ರಿಂದ ಯಾವೆಲ್ಲಾ ಬದಲಾವಣೆಗಳಾಗಲಿವೆ ಎನ್ನುವ ಮಾಹಿತಿ ಇಲ್ಲಿದೆ.

ಕ್ರೆಡಿಟ್ ಸ್ಕೋರ್ ಏಜೆನ್ಸಿಗಳು (ಸಿಬಿಲ್) ಇಷ್ಟು ದಿನ ಪ್ರತಿ 15 ದಿನಗಳಿಗೊಮ್ಮೆ ಕ್ರೆಡಿಟ್ ಡೇಟಾವನ್ನು ನವೀಕರಿಸುತ್ತಿದ್ದವು. ಆದರೆ ಇನ್ನು, ಹೊಸ ವರ್ಷದಿಂದ ಡೇಟಾಗಳು ಪ್ರತಿ ವಾರ ನವೀಕರಣಗೊಳ್ಳುತ್ತವೆ. ಇದು ಸಾಲ ಪಡೆದವರ ಹಣಕಾಸಿನ ವ್ಯವಹಾರದ ಬಗ್ಗೆ ತಿಳಿಯಲು ನೆರವಾಗುತ್ತದೆ.

ಎಸ್ಬಿಐ, ಪಿಎನ್ಬಿ ಮತ್ತು ಎಚ್ಡಿಎಫ್ಸಿ ಸೇರಿ ಹಲವು ಬ್ಯಾಂಕ್ಗಳು ಸಾಲದ ಬಡ್ಡಿದರವನ್ನು ಕಡಿಮೆ ಮಾಡುತ್ತಿದ್ದು, 2026ರಲ್ಲಿ ಬದಲಾವಣೆಯನ್ನು ಕಾಣಬಹುದು. ಇದರ ಜತೆಗೆ ಸ್ಥಿರ ಠೇವಣಿ ಬಡ್ಡಿದರವೂ ಪರಿಷ್ಕರಣೆಗೊಳ್ಳುತ್ತಿದೆ.

ಯುಪಿಐ ಮತ್ತು ಡಿಜಿಟಲ್ ಪಾವತಿಗೆ ಸಂಬಂಧಿಸಿದಂತೆ ಪ್ಯಾನ್, ಆಧಾರ್ ಲಿಂಕ್ ನಿಯಮವನ್ನು ಬಿಗಿಗೊಳಿಸಲಾಗುತ್ತಿದ್ದು, ಪ್ಯಾನ್-ಆಧಾರ್ ಲಿಂಕ್ ಇಲ್ಲದೆ ಬ್ಯಾಂಕ್ ಮತ್ತು ಸರ್ಕಾರಿ ಸೌಲಭ್ಯ ಪಡೆಯುವುದು ಕಷ್ಟವಾಗಲಿದೆ.

ಆದಾಯ ತೆರಿಗೆ ಇಲಾಖೆಯು ‘ಆದಾಯ ತೆರಿಗೆ ಕಾಯ್ದೆ–2025’ರ ಅಡಿಯಲ್ಲಿ ಸರಳೀಕೃತ ಐಟಿಆರ್ ಫಾರ್ಮ್ ಹಾಗೂ ನಿಯಮಗಳ ಜಾರಿ ಕುರಿತು ಜನವರಿಯಲ್ಲಿ ಅಧಿಸೂಚನೆ ಹೊರಡಿಸಲಿದೆ.

ಇದು ಮುಂದಿನ ಆರ್ಥಿಕ ವರ್ಷ ಏಪ್ರಿಲ್ 1ರಿಂದಲೇ ಜಾರಿಗೆ ಬರಲಿದೆ. ಹೊಸ ಕಾನೂನಿನ ಅಡಿಯಲ್ಲಿ ಐಟಿಆರ್ ರಿಟರ್ನ್ ಫಾರ್ಮ್ಗಳನ್ನು ಮತ್ತಷ್ಟು ಸರಳಗೊಳಿಸಲಿದೆ. ಅಲ್ಲದೆ 1961ರಿಂದ
ಜಾರಿಯಲ್ಲಿರುವ ಆದಾಯ ತೆರಿಗೆ ಕಾಯ್ದೆಯನ್ನು ಬದಲಾಯಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.