ಬೆಂಗಳೂರು: ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್‌ನಿಂದ ಜೆಮ್‌ಸ್ಟೋನ್ ಆಭರಣ ಉತ್ಸವದ ಅಂಗವಾಗಿ ಗ್ರಾಹಕರಿಗೆ ಆಕರ್ಷಕ ಕೊಡುಗೆ ಪ್ರಕಟಿಸಲಾಗಿದೆ.
ಜೆಮ್‌ಸ್ಟೋನ್ ಮತ್ತು ಕತ್ತರಿಸದ (ಅನ್‌ಕಟ್) ಆಭರಣಗಳ ಮೇಲಿನ ಮೇಕಿಂಗ್ ಶುಲ್ಕದಲ್ಲಿ ಶೇ 25ರಷ್ಟು ರಿಯಾಯಿತಿ ಮತ್ತು ಪೋಲ್ಕಿ ಆಭರಣದ ಸ್ಟೋನ್ ಮೌಲ್ಯದ ಮೇಲೆ ಶೇ 25ರಷ್ಟು ರಿಯಾಯಿತಿ ದೊರೆಯಲಿದೆ. ಈ ವಿಶೇಷ ಕೊಡುಗೆಗಳು ಎರಾ, ಪ್ರೆಸಿಯಾ ಮತ್ತು ವಿರಾಝ್ ಸಂಗ್ರಹಕ್ಕೆ ಲಭಿಸಲಿದೆ ಎಂದು ಕಂಪನಿ ತಿಳಿಸಿದೆ.
ಹಳೆಯ ಚಿನ್ನದ ವಿನಿಮಯದಲ್ಲಿ ಶೂನ್ಯ ಕಡಿತ, ಖಚಿತ ಬೈಬ್ಯಾಕ್, ಉಡುಗೊರೆಗಳು ದೊರೆಯಲಿದೆ. ಈ ಕೊಡುಗೆಗಳು ಸೆಪ್ಟೆಂಬರ್ 8ರ ವರೆಗೆ ಲಭ್ಯವಿವೆ. ಗ್ರಾಹಕರು ತಮಗಿಷ್ಟವಾದ ಆಭರಣಗಳನ್ನು ಮುಂಗಡವಾಗಿ ಶೇ 10ರಷ್ಟು ಪಾವತಿಸಿ ಕಾಯ್ದಿರಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದೆ.
ಈ ಯೋಜನೆಯಡಿ ಗ್ರಾಹಕರು ಬುಕಿಂಗ್ ಮಾಡಿದ ದಿನದ ದರ ಅಥವಾ ಖರೀದಿಸುವ ದಿನದಲ್ಲಿ ಯಾವ ದರ ಕಡಿಮೆ ಇರುತ್ತದೆಯೋ ಆ ಬೆಲೆಗೆ ಆಭರಣಗಳನ್ನು ಖರೀದಿಸಬಹುದಾಗಿದೆ ಎಂದು ಹೇಳಿದೆ.
‘ಜೆಮ್‌ಸ್ಟೋನ್ ಉತ್ಸವದ ಅಂಗವಾಗಿ ರಾಜ್ಯದ ಎಲ್ಲಾ ಮಳಿಗೆಗಳಲ್ಲಿ ಈ ಆಕರ್ಷಕ ಕೊಡುಗೆಯನ್ನು ಪರಿಚಯಿಸಿದ್ದೇವೆ. ಗ್ರಾಹಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು’ ಎಂದು ಮಲಬಾರ್ ಸಮೂಹದ ಅಧ್ಯಕ್ಷ ಎಂ.ಪಿ. ಅಹ್ಮದ್ ಹೇಳಿದ್ದಾರೆ.