ಬುಧವಾರ, ಏಪ್ರಿಲ್ 8, 2020
19 °C

ಮನಾ ಪ್ರಾಜೆಕ್ಟ್ಸ್‌ಗೆ ‘ಗಬಾ’ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ವರ್ಷದ ಪರಿಸರ ಸ್ನೇಹಿ ನಾವೀನ್ಯ ಯೋಜನೆಗಾಗಿ ಬೆಂಗಳೂರಿನ ರಿಯಲ್ ಎಸ್ಟೇಟ್ ಕಂಪನಿ ಮನಾ ಪ್ರಾಜೆಕ್ಟ್ಸ್‌ಗೆ ಅಂತರರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ‘ಗಬಾ’ ಪ್ರಶಸ್ತಿ (ಗ್ಲೋಬಲ್‌ ಆರ್ಕಿಟೆಕ್ಟ್‌ ಆ್ಯಂಡ್‌ ಬಿಲ್ಡರ್‌ ಅವಾರ್ಡ್ಸ್‌) ಲಭಿಸಿದೆ. ದುಬೈನಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ನೀಡಲಾಯಿತು.

ವಿವಿಧ ದೇಶಗಳಲ್ಲಿರುವ ಆರ್ಕಿಟೆಕ್ಟ್‌, ಬಿಲ್ಡರ್ಸ್ ಮತ್ತು ರಿಯಲ್ ಎಸ್ಟೇಟ್ ವಲಯದಲ್ಲಿ ಕ್ರೀಯಾಶೀಲ ಮತ್ತು ನಾವೀನ್ಯತೆ ಸಾಧಿಸಿರುವವರನ್ನು ಪ್ರೋತ್ಸಾಹಿಸುವುದು ಈ ಪ್ರಶಸ್ತಿಯ ಉದ್ದೇಶವಾಗಿದೆ.

‘ಬೆಂಗಳೂರಿನ ಸರ್ಜಾಪುರ ಮುಖ್ಯ ರಸ್ತೆಯ ಬಳಿ ಮನಾ ಫಾರೆಸ್ಟಾ ಯೋಜನೆ ನಿರ್ಮಿಸಲಾಗಿದೆ. ಇಲ್ಲಿ 225 ಮರಗಳು, ಒಂದು ಸಾವಿರಕ್ಕೂ ಹೆಚ್ಚು ಅಲಂಕಾರಿ ಹೂವಿನ ಗಿಡಗಳಿವೆ. ಹಚ್ಚ ಹಸಿರಿನ ಜತೆಗೆ 60ಕ್ಕೂ ಹೆಚ್ಚು ಜೀವನ ಶೈಲಿಯ ಸೌಲಭ್ಯಗಳನ್ನು ಹೊಂದಿದೆ’ ಎಂದು ಮನಾ ಪ್ರಾಜೆಕ್ಟ್ಸ್‌ನ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಕಿಶೋರ್ ರೆಡ್ಡಿ ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)