ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹7 ಲಕ್ಷ ಕೋಟಿ ದಾಟಿದ ಎಸ್‌ಬಿಐ ಎಂ–ಕ್ಯಾಪ್‌

Published 28 ಏಪ್ರಿಲ್ 2024, 12:47 IST
Last Updated 28 ಏಪ್ರಿಲ್ 2024, 12:47 IST
ಅಕ್ಷರ ಗಾತ್ರ

ನವದೆಹಲಿ: ಕಳೆದ ವಾರದ ಷೇರು ವಹಿವಾಟಿನಲ್ಲಿ ದೇಶದ ಪ್ರಮುಖ 10 ಕಂಪನಿಗಳ ಪೈಕಿ ಆರು ಕಂಪನಿಗಳ ಮಾರುಕಟ್ಟೆ ಮೌಲ್ಯವು (ಎಂ–ಕ್ಯಾಪ್) ₹1.30 ಲಕ್ಷ ಕೋಟಿಗೆ ಏರಿಕೆಯಾಗಿದೆ. 

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ (ಎಸ್‌ಬಿಐ) ಮಾರುಕಟ್ಟೆ ಮೌಲ್ಯಕ್ಕೆ ₹45,158 ಕೋಟಿ ಸೇರ್ಪಡೆಯಾಗಿದೆ. ಬ್ಯಾಂಕ್‌ನ ಒಟ್ಟು ಎಂ–ಕ್ಯಾಪ್‌ ₹7.15 ಲಕ್ಷ ಕೋಟಿಗೆ ಮುಟ್ಟಿದೆ. 

ಐಸಿಐಸಿಐ ಬ್ಯಾಂಕ್‌ ₹28,726 ಕೋಟಿ, ಭಾರ್ತಿ ಏರ್‌ಟೆಲ್‌ ₹20,747 ಕೋಟಿ, ಐಟಿಸಿ ₹18,914 ಕೋಟಿ, ಎಲ್‌ಐಸಿ ₹9,487 ಕೋಟಿ ಮತ್ತು ಇನ್ಫೊಸಿಸ್‌ ಕಂಪನಿಯ ಮಾರುಕಟ್ಟೆ ಮೌಲ್ಯಕ್ಕೆ ₹7,699 ಕೋಟಿ ಸೇರ್ಪಡೆಯಾಗಿದೆ. 

ರಿಲಯನ್ಸ್‌ ಇಂಡಸ್ಟ್ರೀಸ್‌ ₹26,115 ಕೋಟಿ, ಎಚ್‌ಡಿಎಫ್‌ಸಿ ಬ್ಯಾಂಕ್‌ ₹16,371 ಕೋಟಿ, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ ₹5,282 ಕೋಟಿ ಮತ್ತು ಹಿಂದುಸ್ತಾನ್‌ ಯೂನಿಲಿವರ್‌ ಕಂಪನಿಯ ಎಂ–ಕ್ಯಾಪ್‌ ₹2,525 ಕೋಟಿ ಇಳಿಕೆಯಾಗಿದೆ.

ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್‌ 641 ಅಂಶ (ಶೇ 0.87ರಷ್ಟು) ಏರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT