ಮಾರುತಿ ಸುಜುಕಿ ತನ್ನ ನೆಕ್ಸಾ ರಿಟೇಲ್ ಅನ್ನು 2015ರ ಜುಲೈನಲ್ಲಿ ಪ್ರಾರಂಭಿಸಿತು. ನೆಕ್ಸಾ ಅನ್ನು ಉದ್ಘಾಟಿಸಿದ ಒಂದು ವರ್ಷದೊಳಗೆ, ಕಂಪನಿಯು 94 ನಗರಗಳಲ್ಲಿ 100 ನೆಕ್ಸಾ ಮಾರಾಟ ಮಳಿಗೆಗಳನ್ನು ಸ್ಥಾಪಿಸಿತು. 2023-24ನೇ ಹಣಕಾಸು ವರ್ಷದಲ್ಲಿ ನೆಕ್ಸಾ ಮಳಿಗೆಗಳ ಮೂಲಕ 5.61 ಲಕ್ಷಕ್ಕೂ ಹೆಚ್ಚು ವಾಹನಗಳನ್ನು ಮಾರಾಟ ಮಾಡಲಾಗಿದೆ. ಇದರ ಹಿಂದಿನ ಹಣಕಾಸು ವರ್ಷದ ಮಾರಾಟಕ್ಕೆ ಹೋಲಿಸಿದರೆ, ಶೇ 54ರಷ್ಟು ಬೆಳವಣಿಗೆ ದಾಖಲಿಸಿದಂತಾಗಿದೆ. ಮಾರುತಿ ಸುಜುಕಿಯ ದೇಶೀಯ ಮಾರಾಟದಲ್ಲಿ ನೆಕ್ಸಾ ಸುಮಾರು ಶೇ 30ರಷ್ಟು ಪಾಲು ಹೊಂದಿದೆ ಎಂದು ಕಂಪನಿ ತಿಳಿಸಿದೆ.