ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

3 ಕಂಪನಿ ಎಂ–ಕ್ಯಾಪ್‌ ಏರಿಕೆ

Published 23 ಜೂನ್ 2024, 16:34 IST
Last Updated 23 ಜೂನ್ 2024, 16:34 IST
ಅಕ್ಷರ ಗಾತ್ರ

ನವದೆಹಲಿ: ಕಳೆದ ವಾರದ ವಹಿವಾಟಿನಲ್ಲಿ ಷೇರು ಸೂಚ್ಯಂಕಗಳ ಏರಿಕೆಯಿಂದಾಗಿ ಪ್ರಮುಖ 10 ಕಂಪನಿಗಳ ಪೈಕಿ 3 ಕಂಪನಿಗಳ ಸಂಯೋಜಿತ ಮಾರುಕಟ್ಟೆ ಮೌಲ್ಯಕ್ಕೆ (ಎಂ–ಕ್ಯಾಪ್‌) ₹1.06 ಲಕ್ಷ ಕೋಟಿ ಸೇರ್ಪಡೆಯಾಗಿದೆ.

ಎಚ್‌ಡಿಎಫ್‌ಸಿ ಬ್ಯಾಂಕ್‌ ಎಂ–ಕ್ಯಾಪ್‌ಗೆ ₹52,091 ಕೋಟಿ ಸೇರ್ಪಡೆಯಾಗಿದ್ದು, ಬ್ಯಾಂಕ್‌ನ ಒಟ್ಟು ಮಾರುಕಟ್ಟೆ ಮೌಲ್ಯ ₹12.67 ಲಕ್ಷ ಕೋಟಿಗೆ ಮುಟ್ಟಿದೆ. ಐಸಿಐಸಿಐ ಬ್ಯಾಂಕ್‌ ₹36,118 ಕೋಟಿ ಮತ್ತು ಇನ್ಫೊಸಿಸ್‌ ₹17,915 ಕೋಟಿ ಎಂ–ಕ್ಯಾಪ್‌ ಗಳಿಸಿವೆ.

ಇಳಿಕೆ: ರಿಲಯನ್ಸ್‌ ಇಂಡಸ್ಟ್ರೀಸ್‌ ₹32,271 ಕೋಟಿ, ಎಲ್‌ಐಸಿ ₹27,260 ಕೋಟಿ, ಐಟಿಸಿ ₹14,357 ಕೋಟಿ, ಹಿಂದುಸ್ತಾನ್‌ ಯೂನಿಲಿವರ್ ₹8,904 ಕೋಟಿ, ಟಿಸಿಎಸ್‌ ₹8,321 ಕೋಟಿ, ಭಾರ್ತಿ ಏರ್‌ಟೆಲ್‌ ₹7,261 ಕೋಟಿ ಮತ್ತು ಎಸ್‌ಬಿಐ ಮಾರುಕಟ್ಟೆ ಮೌಲ್ಯ ₹3,391 ಕೋಟಿ ಇಳಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT