ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿದ್ಯುತ್‌ ಬೇಡಿಕೆ ಪೂರೈಕೆಗೆ ಕ್ರಮ: ಕೇಂದ್ರ ಸಚಿವಾಲಯ

Published 11 ಮೇ 2024, 14:13 IST
Last Updated 11 ಮೇ 2024, 14:13 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಮೇ ಹಾಗೂ ಜೂನ್‌ ತಿಂಗಳಿನಲ್ಲಿ ಅತಿಯಾಗಿ ವಿದ್ಯುತ್‌ ಬಳಕೆಯಾಗುವ ಸಮಯದಲ್ಲಿ (ಪೀಕ್‌ ಅವರ್‌) ಅಗತ್ಯವಿರುವ ವಿದ್ಯುತ್‌ ಬೇಡಿಕೆಯನ್ನು ಪೂರೈಸುವುದಕ್ಕೆ ಸಂಬಂಧಿಸಿದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ವಿದ್ಯುತ್‌ ಸಚಿವಾಲಯ ತಿಳಿಸಿದೆ.

‘ಏಪ್ರಿಲ್‌ನಲ್ಲಿ ಸಂಜೆ ಅವಧಿಯಲ್ಲಿ 224 ಗಿಗಾವಾಟ್‌ನಷ್ಟು ವಿದ್ಯುತ್‌ ಬೇಡಿಕೆ ಇತ್ತು. ಮುಂಜಾಗ್ರತೆಯಾಗಿ ಕೈಗೊಂಡಿದ್ದ ಕ್ರಮಗಳಿಂದಾಗಿ ಇಷ್ಟು ಪ್ರಮಾಣದ ವಿದ್ಯುತ್ ಪೂರೈಸುವಲ್ಲಿ ಯಶಸ್ವಿಯಾಗಿದ್ದೇವೆ’ ಎಂದು ತಿಳಿಸಿದೆ.

ಮೇ ತಿಂಗಳಿನಲ್ಲಿ ಬೆಳಿಗ್ಗಿನ ಅವಧಿಯಲ್ಲಿ 235 ಗಿಗಾವಾಟ್‌ ಹಾಗೂ ಸಂಜೆ ವೇಳೆ 225 ಗಿಗಾವಾಟ್‌ನಷ್ಟು ವಿದ್ಯುತ್‌ ಬೇಡಿಕೆಯಿದೆ. ಜೂನ್‌ನಲ್ಲಿ ಬೆಳಿಗ್ಗಿನ ಅವಧಿಯಲ್ಲಿ 240 ಗಿಗಾವಾಟ್‌ ಹಾಗೂ ಸಂಜೆ ಅವಧಿಯಲ್ಲಿ 235 ಗಿಗಾವಾಟ್‌ನಷ್ಟು ವಿದ್ಯುತ್‌ಗೆ ಬೇಡಿಕೆ ಸೃಷ್ಟಿಯಾಗಬಹುದೆಂದು ಅಂದಾಜಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT