ಬೆಂಗಳೂರು: ಸರ್ಕಾರಿ ಸ್ವಾಮ್ಯದ ಕೆನರಾ ಬ್ಯಾಂಕ್ ಗ್ರಾಹಕರ ಅನುಕೂಲಕ್ಕಾಗಿ ‘ಕೆನರಾ ಕ್ರೆಸ್ಟ್’ ಸದಸ್ಯತ್ವ ಆರಂಭಿಸಿದೆ.

ಈ ಸದಸ್ಯತ್ವವನ್ನು ಕ್ರೆಸ್ಟ್ ಮತ್ತು ಕ್ರೆಸ್ಟ್ ಪ್ಲಸ್ ಎಂದು ವಿಂಗಡಿಸಲಾಗಿದೆ. ಖಾತೆಯಲ್ಲಿ ಕ್ರಮವಾಗಿ ₹10 ಲಕ್ಷದಿಂದ ₹50 ಲಕ್ಷ ಮತ್ತು ₹50 ಲಕ್ಷ ಹಾಗೂ ಅದಕ್ಕಿಂತ ಹೆಚ್ಚಿನ ಮೊತ್ತ ಕಾಯ್ದುಕೊಳ್ಳುವ ಗ್ರಾಹಕರಿಗೆ ಈ ಸೌಲಭ್ಯ ದೊರೆಯಲಿದೆ ಎಂದು ಬ್ಯಾಂಕ್ ತಿಳಿಸಿದೆ.

ಶೂನ್ಯ ವೆಚ್ಚದ ಈ ಸದಸ್ಯತ್ವವು ಅರ್ಹ ಗ್ರಾಹಕರಿಗೆ ಆಹ್ವಾನದ ಮೂಲಕ ಅಥವಾ ಕೆನರಾ ಕ್ರೆಸ್ಟ್ ಅಡಿ ಹೊಸ ಉಳಿತಾಯ ಖಾತೆ ತೆರೆಯುವವರಿಗೆ ಲಭಿಸಲಿದೆ ಎಂದು ತಿಳಿಸಿದೆ.

ಗ್ರಾಹಕರು ಡಿಜಿಟಲ್ ಇಂಟರ್ಫೇಸ್ ಮೂಲಕ ಈ ಯೋಜನೆಗೆ ಸೇರ್ಪಡೆಯಾಗಬಹುದು. ಕೆನರಾ ಕ್ರೆಸ್ಟ್ ಪಾರಂಪರಿಕ ಬ್ಯಾಂಕಿಂಗ್ ಸೇವೆಯನ್ನು ಮೀರಿ ವಿಶೇಷ ಜೀವನಶೈಲಿ ಸೌಲಭ್ಯಗಳನ್ನು ನೀಡುತ್ತದೆ. ಸದಸ್ಯರು ಈಸಿ ಡೈನರ್ ಸದಸ್ಯತ್ವದ ಮೂಲಕ ಪ್ರೀಮಿಯಂ ಭೋಜನದ ಕೊಡುಗೆ, ಫಿಟ್ಪಾಸ್ ಪ್ರೊ ಮ್ಯಾಕ್ಸ್ ಸದಸ್ಯತ್ವದೊಂದಿಗೆ ಅನಿಯಮಿತ ಜಿಮ್ ಪ್ರವೇಶದ ಸವಲತ್ತನ್ನು ಪಡೆಯಬಹುದು.

24 ಗಂಟೆ ಕಾಲ್ಸೆಂಟರ್ ಸೌಲಭ್ಯವಿದೆ. ಹೆಚ್ಚಿನ ಮಾಹಿತಿಗೆ ಹತ್ತಿರದ ಕೆನರಾ ಬ್ಯಾಂಕ್ ಶಾಖೆ ಅಥವಾ ವೆಬ್ಸೈಟ್ಗೆ ಭೇಟಿ ನೀಡಬಹುದು ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.