ನವದೆಹಲಿ: ದೇಶದ ಮ್ಯೂಚುವಲ್ ಫಂಡ್ ಸಂಸ್ಥೆಗಳು ನಿರ್ವಹಿಸುತ್ತಿರುವ ಸಂಪತ್ತು 2020ರ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಶೇಕಡ 12ರಷ್ಟು ಹೆಚ್ಚಾಗಿದ್ದು, ₹ 27.6 ಲಕ್ಷ ಕೋಟಿಗಳಿಗೆ ತಲುಪಿದೆ.

45 ಸಂಸ್ಥೆಗಳ ನಿರ್ವಹಣಾ ಸಂಪತ್ತು 2020ರ ಜೂನ್ ತ್ರೈಮಾಸಿಕದಲ್ಲಿ ₹ 24.63 ಲಕ್ಷ ಕೋಟಿಗಳಷ್ಟಿತ್ತು ಎಂದು ಮ್ಯೂಚುವಲ್ ಫಂಡ್ ಸಂಸ್ಥೆಗಳ ಒಕ್ಕೂಟ (ಎಎಂಎಫ್‌ಐ) ಮಾಹಿತಿ ನೀಡಿದೆ.

ಪ್ರಮುಖ 10 ಸಂಸ್ಥೆಗಳಾದ ಎಸ್‌ಬಿಐ ಎಂಎಫ್, ಎಚ್‌ಡಿಎಫ್‌ಸಿ ಎಂಎಫ್, ಐಸಿಐಸಿಐ ಪ್ರುಡೆನ್ಶಿಯಲ್ ಎಂಎಫ್, ಆದಿತ್ಯ ಬಿರ್ಲಾ ಸನ್‌ಲೈಫ್ ಎಂಎಫ್, ನಿಪ್ಪಾನ್ ಇಂಡಿಯಾ ಎಂಎಫ್, ಕೋಟಕ್ ಎಂಎಫ್, ಎಕ್ಸಿಸ್ ಎಂಎಫ್, ಯುಟಿಐ ಎಂಎಫ್, ಐಡಿಎಫ್‌ಸಿ ಎಂಎಫ್ ಮತ್ತು ಡಿಎಸ್‌ಪಿ ಎಂಎಫ್ ನಿರ್ವಹಣಾ ಸಂಪತ್ತಿನಲ್ಲಿ ಏರಿಕೆ ಕಂಡುಬಂದಿದೆ.

ಮಾರುಕಟ್ಟೆಯು ಚೇತರಿಕೆ ಕಂಡುಕೊಂಡಿದ್ದರಿಂದಾಗಿ ಸಂಸ್ಥೆಗಳ ನಿರ್ವಹಣಾ ಸಂಪತ್ತು ಹೆಚ್ಚಾಗಿದೆ ಎಂದು ಹೂಡಿಕೆ ಸಲಹಾ ಸಂಸ್ಥೆ ಪ್ರೈಮ್ ಇನ್‌ವೆಸ್ಟರ್ ಡಾಟ್ ಇನ್‌ನ ಸಹ ಸ್ಥಾಪಕಿ ವಿದ್ಯಾ ಬಾಲಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.