ಬುಧವಾರ, ಏಪ್ರಿಲ್ 8, 2020
19 °C

ಮೈಕ್ರೊಸಾಫ್ಟ್‌ ನಿರ್ದೇಶಕ ಮಂಡಳಿ ತೊರೆದ ಬಿಲ್‌ ಗೇಟ್ಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸ್ಯಾನ್‌ಫ್ರಾನ್ಸಿಸ್ಕೊ: ಮೈಕ್ರೊಸಾಫ್ಟ್‌ನ ಸಹ ಸ್ಥಾಪಕ ಬಿಲ್‌ ಗೇಟ್ಸ್‌ ಅವರು ದಾನ ಧರ್ಮ ಕಾರ್ಯಗಳಲ್ಲಿ ತಮ್ಮನ್ನು ಹೆಚ್ಚಾಗಿ ತೊಡಗಿಸಿಕೊಳ್ಳುವ ಉದ್ದೇಶದಿಂದ ಕಂಪನಿಯ ನಿರ್ದೇಶಕ ಮಂಡಳಿಯಿಂದ ಹೊರನಡೆದಿದ್ದಾರೆ.

64 ವರ್ಷದ ಅವರು ದಶಕದ ಹಿಂದೆಯೇ ಕಂಪನಿಯ ದೈನಂದಿನ ಕೆಲಸಗಳಿಂದ ದೂರ ಉಳಿದು, ತಮ್ಮ ಪತ್ನಿ ಜತೆ ಸ್ಥಾಪಿಸಿರುವ ಮಿಲಿಂದಾ ಫೌಂಡೇಷನ್‌ ಚಟುವಟಿಕೆಗಳಿಗೆ ಹೆಚ್ಚಿನ ಗಮನ ನೀಡಿದ್ದರು.

‘ಅವರೊಂದಿಗೆ ಕೆಲಸ ಮಾಡಲು ಅವಕಾಶ ದೊರೆತದ್ದು ನನ್ನ ಪುಣ್ಯವೇ ಸರಿ. ಅವರಿಂದ ಬಹಳಷ್ಟನ್ನು ಕಲಿತಿದ್ದೇನೆ’ ಎಂದು ಸಿಇಒ ಸತ್ಯ ನಾದೆಲ್ಲಾ ಅವರು ತಿಳಿಸಿದ್ದಾರೆ.

ಚೀನಾದಾಚೆಗೆ ಆ್ಯಪಲ್‌ ಮಳಿಗೆ ಬಂದ್

ಆ್ಯಪಲ್‌ ಕಂಪನಿಯು ಚೀನಾದಾಚೆಗೆ ಇರುವ ತನ್ನೆಲ್ಲಾ ಆ್ಯಪಲ್‌ ಸ್ಟೋರ್‌ಗಳನ್ನು ಇದೇ 27ರವರೆಗೆ ಮುಚ್ಚುವುದಾಗಿ ತಿಳಿಸಿದೆ. ಕೊರೊನಾ ವೈರಸ್‌ ಹರಡುತ್ತಿರುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಸಿಇಒ ಟಿಮ್‌ ಕುಕ್‌ ತಿಳಿಸಿದ್ದಾರೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು