‘ಎಂಎಸ್‌ಎಂಇ’ ಸಾಲ: ರಾಜ್ಯದಲ್ಲಿ ಇಳಿಕೆ

7

‘ಎಂಎಸ್‌ಎಂಇ’ ಸಾಲ: ರಾಜ್ಯದಲ್ಲಿ ಇಳಿಕೆ

Published:
Updated:
Prajavani

ಬೆಂಗಳೂರು: ಗರಿಷ್ಠ ಪ್ರಮಾಣದಲ್ಲಿ ಉದ್ಯೋಗ ಅವಕಾಶ ಕಲ್ಪಿಸುವ ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ (ಎಂಎಸ್‌ಎಂಇ) ರಾಜ್ಯದಲ್ಲಿ ಬ್ಯಾಂಕ್ ಸಾಲ ಸೌಲಭ್ಯವು ನಾಲ್ಕು ವರ್ಷಗಳಿಂದ ಕಡಿಮೆಯಾಗುತ್ತ ಬಂದಿದೆ.

ನೆರೆಹೊರೆಯ ರಾಜ್ಯಗಳಲ್ಲಿ ಈ ವಲಯಕ್ಕೆ ಮಂಜೂರು ಮಾಡಿದ ಸಾಲದ ಪ್ರಮಾಣವು ಏರಿಕೆ ಹಾದಿಯಲ್ಲಿ ಇರುವಾಗ, ಕರ್ನಾಟಕದಲ್ಲಿ ಮಾತ್ರ ಈ ಪ್ರಮಾಣ ಕಡಿಮೆಯಾಗಿರುವುದನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ನ ಅಂಕಿ ಅಂಶಗಳು ದೃಢಪಡಿಸಿವೆ.

2014ರಲ್ಲಿ ₹ 56 ಸಾವಿರ ಕೋಟಿಗಳಷ್ಟಿದ್ದ ಸಾಲದ ಪ್ರಮಾಣವು, 2018ರಲ್ಲಿ ₹ 47 ಸಾವಿರ ಕೋಟಿಗಳಿಗೆ ಇಳಿದಿದೆ.

ಇದೇ ಅವಧಿಯಲ್ಲಿ ತಮಿಳುನಾಡಿನಲ್ಲಿ ₹10 ಸಾವಿರ ಕೋಟಿ, ಕೇರಳದಲ್ಲಿ ₹ 6 ಸಾವಿರ ಕೋಟಿ ಮತ್ತು ತೆಲಂಗಾಣದಲ್ಲಿ ₹ 9 ಸಾವಿರ ಕೋಟಿಗಳ ಏರಿಕೆಯಾಗಿದೆ.

ಉತ್ತರ ಪ್ರದೇಶ ಅತಿ ಹೆಚ್ಚಿನ ಸಂಖ್ಯೆಯ ಎಂಎಸ್‌ಎಂಇ ಘಟಕಗಳನ್ನು (90 ಲಕ್ಷ) ಹೊಂದಿದೆ. ನಂತರದ ಸ್ಥಾನದಲ್ಲಿ ಪಶ್ಚಿಮ ಬಂಗಾಳ (88 ಲಕ್ಷ) ಇದೆ. 38.34 ಲಕ್ಷದಷ್ಟು ಕೈಗಾರಿಕೆಗಳನ್ನು ಹೊಂದಿರುವ ಕರ್ನಾಟಕ 5ನೆ ಸ್ಥಾನದಲ್ಲಿ ಇದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !