ಗುರುವಾರ , ಆಗಸ್ಟ್ 18, 2022
26 °C

ಹೊಸೂರು ಎಂಎಸ್‌ಎಂಇ: ಜುಲೈನಲ್ಲಿ 2 ದಿನ ಮುಷ್ಕರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ: ಸೂರಿನ ಕೈಗಾರಿಕಾ ಕೇಂದ್ರದಲ್ಲಿ ಇರುವ 2 ಸಾವಿರಕ್ಕೂ ಅಧಿಕ ಎಂಎಸ್ಎಂಇಗಳು ಜುಲೈ 13 ಮತ್ತು 14ರಂದು ಮುಷ್ಕರಕ್ಕೆ ಕರೆ ನೀಡಿವೆ. ಉತ್ಪನ್ನಗಳ ವೆಚ್ಚ ಮತ್ತು ಬೆಲೆಗೆ ಸಂಬಂಧಿಸಿದ ಹೊಸ ನೀತಿಗಳನ್ನು
ಒಪ್ಪಿಕೊಳ್ಳುವಂತೆ ಕಂಪನಿಗಳಿಗೆ ಆಗ್ರಹಿಸಿ ಈ ಮುಷ್ಕರಕ್ಕೆ ಕರೆ ನೀಡಿವೆ.

‘ನಾವು ಮಾಡುವ ಕೆಲಸಕ್ಕೆ ತಕ್ಕ ಬೆಲೆ ಸಿಗುತ್ತಿಲ್ಲ ಎಂದು ಅನ್ನಿಸುತ್ತಿದೆ. ಜಿಎಸ್‌ಟಿ ವ್ಯವಸ್ಥೆ ಮತ್ತು ಕೋವಿಡ್‌ ನಿಯಂತ್ರಿಸಲು ಜಾರಿಗೆ ತಂದ ಲಾಕ್‌ಡೌನ್‌
ಗಳಿಂದಾಗಿ ಐದು ವರ್ಷಗಳಿಂದ ನಷ್ಟ ಆಗಿದ್ದು, ಒತ್ತಡದಲ್ಲಿ ಇದ್ದೇವೆ’ ಎಂದು ಹೊಸೂರಿನ ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆಗಳ ಸಂಘದ (ಎಚ್‌ಒಎಸ್‌ಟಿಐಎ) ಅಧ್ಯಕ್ಷ ಕೆ. ವೇಲುಮುರುಗನ್‌ ತಿಳಿಸಿದ್ದಾರೆ.

‘ದೊಡ್ಡ ಕಂಪನಿಗಳಿಗೆ ಮಾಡಿ
ಕೊಡುವ ಕೆಲಸ ಮತ್ತು ಉತ್ಪನ್ನಗಳ ದರ ಪಟ್ಟಿಯು ಬೆಂಗಳೂರಿನಂತಹ ನಗರಗಳಲ್ಲಿ ಇರುವುದಕ್ಕಿಂತಲೂ ಬಹಳಷ್ಟು ಕಡಿಮೆ ಇದೆ’ ಎಂದು ಅವರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು