ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಐಪಿ: ₹2 ಲಕ್ಷ ಕೋಟಿ ಹೂಡಿಕೆ

Published 11 ಏಪ್ರಿಲ್ 2024, 14:04 IST
Last Updated 11 ಏಪ್ರಿಲ್ 2024, 14:04 IST
ಅಕ್ಷರ ಗಾತ್ರ

ನವದೆಹಲಿ: 2023–24ನೇ ಆರ್ಥಿಕ ವರ್ಷದಲ್ಲಿ ವ್ಯವಸ್ಥಿತ ಹೂಡಿಕೆ ಯೋಜನೆ (ಎಸ್‌ಐಪಿ) ಮೂಲಕ ಮ್ಯೂಚುವಲ್ ಫಂಡ್‌ಗಳಲ್ಲಿ ₹2 ಲಕ್ಷ ಕೋಟಿ ಹೂಡಿಕೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಹೂಡಿಕೆಯಲ್ಲಿ ಶೇ 28ರಷ್ಟು ಏರಿಕೆಯಾಗಿದೆ.  

ಭಾರತದ ಆರ್ಥಿಕತೆಯ ಮುನ್ನೋಟದಲ್ಲಿ ಚೇತರಿಕೆ ಹಾಗೂ ಮಾರುಕಟ್ಟೆಯಲ್ಲಿ ಹೂಡಿಕೆದಾರರ ಪಾಲ್ಗೊಳ್ಳುವಿಕೆಯು ಹೆಚ್ಚಿರುವುದೇ ಈ ಏರಿಕೆ ಕಾರಣವಾಗಿದೆ ಎಂದು ಭಾರತೀಯ ಮ್ಯೂಚುವಲ್ ಫಂಡ್‌ಗಳ ಒಕ್ಕೂಟ (ಎಎಂಎಫ್‌ಐ) ತಿಳಿಸಿದೆ.

2016–17ರಲ್ಲಿ ಮ್ಯೂಚುವಲ್‌ ಫಂಡ್‌ಗಳಲ್ಲಿ ₹43,921 ಕೋಟಿಯಷ್ಟು ಹೂಡಿಕೆಯಾಗಿತ್ತು. ಇದಕ್ಕೆ ಹೋಲಿಸಿದರೆ ಕಳೆದ ಏಳು ವರ್ಷಗಳ ಅವಧಿಯಲ್ಲಿ ಹೂಡಿಕೆಯಲ್ಲಿ ನಾಲ್ಕೂವರೆ ಪಟ್ಟು ಹೆಚ್ಚಳವಾಗಿದೆ ಎಂದು ಹೇಳಿದೆ.

‘ಫೆಬ್ರುವರಿಯಲ್ಲಿ ಎಸ್‌ಐಪಿಗಳ ಸರಾಸರಿ ಸಂಪತ್ತು ನಿರ್ವಹಣಾ ಮೊತ್ತವು (ಎಯುಎಂ) ₹10.52 ಲಕ್ಷ ಕೋಟಿ ಇತ್ತು. ಮಾರ್ಚ್‌ ಅಂತ್ಯಕ್ಕೆ ₹10.71 ಲಕ್ಷ ಕೋಟಿಗೆ ತಲುಪಿದೆ. ಹೂಡಿಕೆದಾರರು ಶಿಸ್ತುಬದ್ಧವಾಗಿ ಸಂಪತ್ತಿನ ಕ್ರೋಡೀಕರಣಕ್ಕೆ ಒತ್ತು ನೀಡಿದ್ದಾರೆ. ಹಾಗಾಗಿ, ನಿರ್ವಹಣಾ ಸಂಪತ್ತಿನ ಮೊತ್ತವು ಏರಿಕೆಯಾಗಿದೆ’ ಎಂದು ಎಎಂಎಫ್‌ಐನ ಮುಖ್ಯ ನಿರ್ವಾಹಕ ವೆಂಕಟ್ ಚಲಸಾನಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT