ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರದಲ್ಲಿ 9 ಕಂಪನಿಗಳ ಗಳಿಕೆ ₹2.12 ಲಕ್ಷ ಕೋಟಿ

Last Updated 13 ನವೆಂಬರ್ 2022, 11:33 IST
ಅಕ್ಷರ ಗಾತ್ರ

ನವದೆಹಲಿ: ನವೆಂಬರ್‌ 11ಕ್ಕೆ ಕೊನೆಗೊಂಡ ವಾರದಲ್ಲಿ ಮುಂಬೈ ಷೇರುಪೇಟೆಯಲ್ಲಿ ನೋಂದಾಯಿತ ಪ್ರಮುಖ 10 ಕಂಪನಿಗಳಲ್ಲಿ ಒಂಬತ್ತು ಕಂಪನಿಗಳ ಮಾರುಕಟ್ಟೆ ಮೌಲ್ಯ ₹2.12 ಲಕ್ಷ ಕೋಟಿ ಹೆಚ್ಚಾಗಿದೆ. ಹಿಂದುಸ್ತಾನ್‌ ಯೂನಿಲಿವ್ರ್‌ ಲಿಮಿಟೆಡ್‌ (ಎಚ್‌ಯುಎಲ್‌) ಮಾತ್ರ ನಷ್ಟ ಕಂಡಿದೆ.

ಎಚ್‌ಡಿಎಫ್‌ಸಿ ಬ್ಯಾಂಕ್‌ ಮಾರುಕಟ್ಟೆ ಮೌಲ್ಯವು ₹63,462 ಕೋಟಿಯಷ್ಟು ಗರಿಷ್ಠ ಏರಿಕೆ ಕಂಡಿದೆ. ಇದರಿಂದಾಗಿ ಬ್ಯಾಂಕ್‌ನ ಒಟ್ಟು ಬಂಡವಾಳ ಮೌಲ್ಯವು ₹8.97 ಲಕ್ಷ ಕೋಟಿಗೆ ತಲುಪಿದೆ.

ಟಾಟಾ ಕನ್ಸಲ್ಟನ್ಸಿ ಸರ್ವೀಸಸ್‌ (ಟಿಸಿಎಸ್‌) ಮಾರುಕಟ್ಟೆ ಮೌಲ್ಯ ₹36,517 ಕೋಟಿ ಹೆಚ್ಚಾಗಿ ₹12.13 ಲಕ್ಷ ಕೋಟಿಗೆ ಏರಿಕೆ ಆಗಿದೆ.

ಎಚ್‌ಡಿಎಫ್‌ಸಿ ಲಿಮಿಟೆಡ್‌ನ ಮಾರುಕಟ್ಟೆ ಮೌಲ್ಯ ₹29,422 ಕೋಟಿಯಷ್ಟು ಹೆಚ್ಚಾಗಿದೆ. ರಿಲಯನ್ಸ್ ಇಂಡಸ್ಟ್ರೀಸ್‌ ಮಾರುಕಟ್ಟೆ ಮೌಲ್ಯ ₹26,317 ಕೋಟಿ ಏರಿಕೆ ಆಗಿದೆ. ಇನ್ಫೊಸಿಸ್‌ (₹23,626 ಕೋಟಿ), ಅದಾನಿ ಎಂಟರ್‌ಪ್ರೈಸಸ್‌ (₹20,103 ಕೋಟಿ) ಮಾರುಕಟ್ಟೆ ಮೌಲ್ಯದಲ್ಲಿಯೂ ಏರಿಕೆ ಆಗಿದೆ. ಎಚ್‌ಯುಎಲ್‌ಗೆ ₹3,912 ಕೋಟಿ ನಷ್ಟವಾಗಿದ್ದು, ಮಾರುಕಟ್ಟೆ ಮೌಲ್ಯವು ₹5.88 ಲಕ್ಷ ಕೋಟಿಗೆ ಇಳಿಕೆ ಕಂಡಿದೆ.

ಅತ್ಯಂತ ಮೌಲ್ಯಯುತ ಕಂಪನಿಗಳ ಪಟ್ಟಿಯಲ್ಲಿ ರಿಲಯನ್ಸ್‌ ಮೊದಲ ಸ್ಥಾನದಲ್ಲಿದೆ. ಟಿಸಿಎಸ್‌, ಎಚ್‌ಡಿಎಫ್‌ಸಿ ಬ್ಯಾಂಕ್‌ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT