ಟೋಕಿಯೊ: ಜಪಾನ್ನ ವಾಹನ ತಯಾರಿಕಾ ಕಂಪನಿಗಳಾದ ಹೋಂಡಾ ಮತ್ತು ನಿಸ್ಸಾನ್ ವಿಲೀನಗೊಳ್ಳುವುದಾಗಿ ಘೋಷಿಸಿವೆ.

ಈ ಕುರಿತ ತಿಳಿವಳಿಕೆ ಪತ್ರಕ್ಕೆ ಕಂಪನಿಗಳು ಸೋಮವಾರ ಸಹಿ ಹಾಕಿವೆ. ನಿಸ್ಸಾನ್ನ ಮಿತ್ಸುಬಿಷಿ ಮೋಟರ್ಸ್ ಸಹ ಇದರಲ್ಲಿ ಪಾಲ್ಗೊಳ್ಳಲು ಒಪ್ಪಿಗೆ ನೀಡಿದೆ. ಈ ವಿಲೀನದಿಂದ ಜಗತ್ತಿನ ಮೂರನೇ ಅತಿದೊಡ್ಡ ವಾಹನ ತಯಾರಿಕಾ ಕಂಪನಿಯಾಗಿ ಹೊರಹೊಮ್ಮಲಿದೆ.

ದೇಶೀಯ ಹಾಗೂ ಜಾಗತಿಕ ಮಟ್ಟದಲ್ಲಿನ ಪ್ರತಿಸ್ಪರ್ಧಿಗಳಿಂದ ಎದುರಾಗಿರುವ ಸ್ಪರ್ಧೆಗೆ ಸವಾಲೊಡ್ಡಲು ಈ ನಿರ್ಧಾರ ಕೈಗೊಂಡಿವೆ ಎಂದು ಹೇಳಲಾಗಿದೆ.

ಮೂರು ಕಂಪನಿಗಳ ಒಟ್ಟು ಮಾರುಕಟ್ಟೆ ಬಂಡವಾಳ ಮೌಲ್ಯ ₹4.25 ಲಕ್ಷ ಕೋಟಿಗೆ ತಲುಪಲಿದೆ.

2023ರಲ್ಲಿ ಟೊಯೊಟ ಕಂಪನಿಯು 1.15 ಕೋಟಿ ವಾಹನಗಳನ್ನು ತಯಾರಿಸಿತ್ತು. ಇದೇ ಅವಧಿಯಲ್ಲಿ ಹೋಂಡಾ 40 ಲಕ್ಷ, ನಿಸ್ಸಾನ್ 34 ಲಕ್ಷ ಮತ್ತು ಮಿತ್ಸುಬಿಷಿ 10 ಲಕ್ಷಕ್ಕೂ ಹೆಚ್ಚು ವಾಹನಗಳನ್ನು ತಯಾರಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.