ಸೋಮವಾರ, ಅಕ್ಟೋಬರ್ 26, 2020
24 °C

‘ಎರಡನೆಯ ಹಂತದ ಆರ್ಥಿಕ ಪ್ಯಾಕೇಜ್‌ ಬಗ್ಗೆ ಚರ್ಚೆ ನಡೆದಿಲ್ಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಆರ್ಥಿಕ ಪುನಶ್ಚೇತನಕ್ಕೆ ಎರಡನೆಯ ಹಂತದ ಪ್ಯಾಕೇಜ್ ಘೋಷಿಸುವ ಬಗ್ಗೆ ಇನ್ನೂ ಯಾವುದೇ ಚರ್ಚೆ ನಡೆದಿಲ್ಲ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.

ದೇಶದ ಅರ್ಥ ವ್ಯವಸ್ಥೆಯು ಕುಸಿತ ಕಂಡಷ್ಟೇ ವೇಗವಾಗಿ ಚೇತರಿಕೆಯನ್ನೂ ಕಾಣಲಿದೆ ಎಂಬ ಭರವಸೆ ಕೇಂದ್ರದ್ದು. ಜಿಎಸ್‌ಟಿ ಸಂಗ್ರಹ ಪ್ರಮಾಣ, ತಯಾರಿಕಾ ವಲಯದ ಚೇತರಿಕೆ, ಸರಕು ಸಾಗಣೆ ವಾಹನಗಳ ಸಂಚಾರ, ವಿದ್ಯುತ್‌ ಬಳಕೆ... ಇವೆಲ್ಲವೂ ಆಶಾದಾಯಕವಾಗಿ ಇವೆ ಎಂದು ಅಧಿಕಾರಿಗಳು ಹೇಳುತ್ತಾರೆ.

‘ಈಚೆಗೆ ಬಿಡುಗಡೆ ಆಗಿರುವ ಕೆ.ವಿ. ಕಾಮತ್ ಸಮಿತಿಯ ವರದಿಯು ವಿವಿಧ ಉದ್ಯಮ ವಲಯಗಳ ಸಾಲಗಳನ್ನು ಮರುಹೊಂದಾಣಿಕೆ ಮಾಡಿಕೊಡಬೇಕು ಎಂಬ ಸಲಹೆ ನೀಡಿದೆ. ಇದು ಕಾರ್ಯರೂಪಕ್ಕೆ ಬಂದ ನಂತರ, ಹಲವು ವಲಯಗಳ ಆರ್ಥಿಕ ಹೊರೆ ನಿವಾರಣೆ ಆಗಲಿದೆ ಎಂಬ ಭಾವನೆ ಕೂಡ ಇದೆ’ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು